ನೌಕಾ ಪಡೆಯ ಮುಂದಿನ ಮುಖ್ಯಸ್ಥರಾಗಿ ಅಡ್ಮಿರಲ್‌ ಕರಮ್‌ ಬೀರ್‌ ಸಿಂಗ್‌ ನೇಮಕ

ನವದೆಹಲಿ: ಕೇಂದ್ರ ಸರಕಾರ ವೈಸ್‌ ಅಡ್ಮಿರಲ್‌ ಕರಮ್‌ ಬೀರ್‌ ಸಿಂಗ್‌ ಅವರನ್ನು ಮುಂದಿನ ನೌಕಾ ಪಡೆ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ.

ಮೇ 31ರಂದು ಹಾಲಿ ನೌಕಾ ಪಡೆ ಮುಖ್ಯಸ್ಥ ಸುನೀಲ್‌ ಲಾಂಬಾ ಅವರ ಅಧಿಕಾರಾವಧಿ ಮುಗಿಯಲಿದ್ದು ಈ ಹಿನ್ನಲೆಯಲ್ಲಿ ಆ ಬಳಿಕ ಅವರ ಸ್ಥಾನವನ್ನು ಕರಮ್‌ ಬೀರ್‌ ಸಿಂಗ್‌ ಅಧಿಕಾರ ವಹಿಸಿಕೊಳ್ಲಲಿದ್ದಾರೆ.

ವೈಸ್‌ ಅಡ್ಮಿರಲ್‌ ಕರಮ್‌ಬೀರ್‌ ಸಿಂಗ್‌, ಪಿವಿಎಸ್‌ಎಂ, ಎವಿಎಸ್‌ಎಂ, 2017ರ ಅಕ್ಟೋಬರ್‌ 31ರಂದು ಈಸ್ಟರ್ನ್ ನೇವಲ್‌ ಕಮಾಂಡ್‌ ನ ಫ್ಲ್ಯಾಗ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಇವರು ಮಹಾರಾಷ್ಟ್ರದ ಖಡಕ್‌ವಾಸ್ಲಾ ದಲ್ಲಿನ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ (ಎನ್‌ಡಿಎ) ಹಳೆವಿದ್ಯಾರ್ಥಿಯಾಗಿದ್ದಾರೆ.

vice admiral karambir singh, next indian navy chief

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ