ಗೋವಾ ನೂತನ ಮುಖ್ಯಮಂತ್ರಿಯಾಗಿ ಪ್ರಮೋದ್‌ ಸಾವಂತ್‌ ಪ್ರದಗ್ರಹಣ

ಪಣಜಿ: ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್‌ ಪಾರೀಕರ್‌ ನಿಧನದ ಬೆನ್ನಲ್ಲೇ ಮೈತ್ರಿ ಸರಕಾರದಲ್ಲಿ ಭುಗಿಲೆದ್ದಿದ್ದ ಮುಖ್ಯಮಂತ್ರಿ ಗಾದಿಯ ಪೈಪೋಟಿಗೆ ಕೊನೆಗೂ ತೆರೆಬಿದ್ದಿದೆ. ಬಿಜೆಪಿಯ ಹಿರಿಯ ನಾಯಕ ಪ್ರಮೋದ್‌ ಸಾವಂತ್‌ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.

ರಾತ್ರಿಯೇ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಮೋದ್‌ ಸಾವಂತ್‌ ಮುಖ್ಯಮಂತ್ರಿಯಾಗಿ ಹಾಗೂ ಮಹಾ ರಾಷ್ಟ್ರವಾದಿ ಗೋಮಂತಕ್‌ ಪಾರ್ಟಿಯ (ಎಂಜಿಪಿ) ಸುಧಿನ್‌ ಧವಾಲಿಕರ್‌ ಹಾಗೂ ಗೋವಾ ಫಾರ್ವರ್ಡ್‌ ಪಾರ್ಟಿಯ (ಜಿಎಫ್ಪಿ) ನಾಯಕ ವಿಜಯ್‌ ಸರ್ದೇಸಾಯಿಗೆ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು.

ನೂತನ ಸಿಎಂ ಸಾವಂತ್‌ ಬಿಎಎಎಂಸ್‌ ಮತ್ತು ಸಮಾಜಕಾರ್ಯದಲ್ಲಿ ಸ್ನಾತ ಕೋತ್ತರ ಪದವಿ ಪಡೆದಿದ್ದಾರೆ.

ಒಟ್ಟು 40 ಸ್ಥಾನ ಗಳುಳ್ಳ ಗೋವಾ ವಿಧಾನಸಭೆಯಲ್ಲಿ ಬಿಜೆಪಿ 21 ಸ್ಥಾನ ಹೊಂದಿದ್ದು, ಎಂಜಿಪಿ, ಜಿಎಫ್ಪಿಯಿಂದ ತಲಾ ಮೂವರು ಹಾಗೂ ಮೂವರು ಪಕ್ಷೇತರರ ಬೆಂಬಲ ದೊಂದಿಗೆ ಸರಕಾರರಚಿಸಿದೆ. ಹಾಗಾಗಿ, ಪಾರೀಕರ್‌ ನಿಧನದ ಬೆನ್ನಲ್ಲೇ ಮುಖ್ಯಮಂತ್ರಿ ಗಾದಿಗೆ ನಡೆದ ಹಗ್ಗಜಗ್ಗಾಟದಿಂದಾಗಿ ಸರಕಾರ ಅತಂತ್ರ ಸ್ಥಿತಿಗೆ ತಲುಪುವ ಸಾಧ್ಯತೆ ದಟ್ಟವಾಗಿ ಗೋಚರಿಸಿತ್ತು.

BJP’s Pramod Sawant Takes Oath as Goa Chief Minister at 2am Ceremony

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ