ಹುಬ್ಬಳ್ಳಿ, ಮಾ.13- ಲೋಕಸಭೆ ಚುನಾವಣೆ ಕಾವು ದೇಶಾದ್ಯಂತ ರಂಗೇರುತ್ತಿದ್ದು, ರಾಷ್ಟ್ರೀಯ ಪಕ್ಷಗಳ ಮತದಾರರನ್ನು ಸೆಳೆಯಲು ಹಲವಾರು ಪ್ರಚಾರ ತಂತ್ರಗಳನ್ನು ಬಳಸುತ್ತಿವೆ. ಈ ಮಧ್ಯೆ ವಿದ್ಯಾರ್ಥಿನಿಯೊಬ್ಬರು ಮೋದಿ ಪರ ವಿಶಿಷ್ಟವಾಗಿ ಪ್ರಚಾರ ಕೈಗೊಂಡಿದ್ದಾರೆ.
ಕಾಲೇಜೊಂದರ ವಿದ್ಯಾರ್ಥಿನಿ ತನ್ನ ಕೈಗೆ ವೋಟ್ ಫಾರ್ ಮೋದಿ ಎಂದು ಅಚ್ಚೆ ಹಾಕಿಸಿಕೊಂಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೋದಿಗೆ ವೋಟ್ ಮಾಡಿ ಎಂಬ ಅಚ್ಚೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ವಿದ್ಯಾರ್ಥಿನಿಯ ಈ ಟ್ಯಾಟೂ ಪೋಟೋವನ್ನು ಶೇರ್ ಮಾಡುತ್ತಿದ್ದು, ಈ ಮುಲಕ ಮೋದಿಗೆ ಪ್ರಚಾರ ನೀಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ಈ ಅಚ್ಚೆಗೆ ಮಾರು ಹೋಗಿದ್ದಾರೆ.