ಶ್ರೀನಗರ: ಫೆಬ್ರವರಿ 14 ರಂದು ನಡೆಯ ಪುಲ್ವಾಮಾ ಉಗ್ರರ ದಾಳಿಗೆ ಕಾರಣನಾದ ಮಾಸ್ಟರ್ ಮೈಂಡ್ ಇಂದು ದಕ್ಷಿಣ ಕಾಶ್ಮೀರದ ತ್ರಾಲ್ನಲ್ಲಿ ನಡೆದ ಎನ್ ಕೌಂಟರ್ನಲ್ಲಿ ಹತ್ಯೆಗೀಡಾಗಿದ್ದಾನೆ ಎಂದು ಸೇನೆಯ ಮೂಲಗಳು ತಿಳಿಸಿವೆ.
ಪುಲ್ವಾಮ ಜಿಲ್ಲೆಯ ತ್ರಾಲ್ನಲ್ಲಿ ಮಧ್ಯರಾತ್ರಿಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಜೈಶ್ -ಇ-ಮೊಹಮದ್ ಸಂಘಟನೆಯ ಮೂವರು ಭಯೋತ್ಪಾದರು ಹತರಾಗಿದ್ದಾರೆ. ಅವರಲ್ಲಿ ಪುಲ್ವಾಮ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಮುದಾಸಿರ್ ಅಹ್ಮದ್ ಖಾನ್ ಅಲಿಯಾಸ್ ಮೊಹಮದ್ ಭಾಯ್ ಕೂಡ ಸತ್ತಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಹತ್ಯೆಯಾದ ಮೂವರು ಉಗ್ರರ ದೇಹಗಳು ಗುರುತಿಸಲು ಸಾಧ್ಯವಾಗದಷ್ಟು ಸುಟ್ಟು ಕರಕಲಾಗಿವೆ. ಬೇರೆ ರೀತಿಯಲ್ಲಿ ಅವರನ್ನು ಗುರುತಿಸುವ ಪ್ರಯತ್ನ ಮಾಡಲಾಗುತ್ತಿದೆ. ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಭರ್ಜರಿ ಭೇಟಿಯಾಡಿದ್ದಾರೆ. ಪುಲ್ವಾಮಾ ಜಿಲ್ಲೆಯ ತ್ರಾಲ್ ಪಿಂಗ್ಲಿಷ್ ಗ್ರಾಮದ ಬಳಿ ನಡೆದ ಎನ್ಕೌಂಟರ್ನಲ್ಲಿ ಮೂವರು ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಈವರೆಗೆ ಕ್ರೋಢಿಕರಿಸಿದ ಸಾಕ್ಷ್ಯಗಳ ಪ್ರಕಾರ ದಾಳಿಯ ಹಿಂದೆ ಇದ್ದ ವ್ಯಕ್ತಿಯನ್ನು ಪತ್ತೆ ಮಾಡಲಾಗಿದೆ. ಮುದಾಸೀರ್ ಎಂಬ 23 ವರ್ಷದ ಪುಲ್ವಾಮ ಜಿಲ್ಲೆಯ ಉಗ್ರ ದಾಳಿ ನಡೆಸಲು ವಾಹನ ಮತ್ತು ಸ್ಫೋಟಕಗಳನ್ನು ಒದಗಿಸಿದ್ದ.