ನವದೆಹಲಿ: ಫೆಬ್ರವರಿ 14ರಂದು ನಡೆದ ಪುಲ್ವಾಮಾ ಉಗ್ರ ದಾಳಿ ಬಳಿಕ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಜೆಷೆ ಮೊಹಮ್ಮದ್ ಸಂಘಟನೆಗೆ ಸೇರಿದ 6 ಉಗ್ರರು ಸೇರಿದಂತೆ ಒಟ್ಟು 18 ಭಯೋತ್ಪಾದಕರನ್ನು ಸದೆಬಡಿಯಲಾಗಿದೆ ಎಂದು ಸೇನೆ ಸ್ಪಷ್ಟಪಡಿಸಿದೆ.
ಪುಲ್ವಾಮಾ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಮುದಾಸಿರ್ ಅಹ್ಮದ್ ಖಾನ್ ಅಲಿಯಾಸ್ ಮೊಹಮ್ಮದ್ ಭಾಯ್ ಎಂಬ ಉಗ್ರನನ್ನು ಥ್ರಾಲ್ ಎನ್ಕೌಂಟರ್ನಲ್ಲಿ ಹತ್ಯೆಯಾಗಿರುವುದನ್ನೂ ಸೇನೆ ಖಚಿತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಶ್ಮೀರದ ಐಜಿ ಎಸ್.ಪಿ.ಪಾಣಿ, ಪುಲ್ವಾಮಾ ದಾಳಿ ಮಾಸ್ಟರ್ ಮೈಂಡ್ ಮುದಾಸಿರ್ ಅಹ್ಮದ್ ಖಾನ್ ಹತ್ಯೆಯಿಂದ ಜೆಷೆ ಮೊಹಮ್ಮದ್ ಉಗ್ರ ಸಂಘಟನೆಗೆ ಭಾರಿ ಹೊಡೆತ ಬಿದ್ದಿದ್ದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಥ್ರಾಲ್ ಪ್ರದೇಶದ ಪಿಂಗ್ಲಿಷ್ ಪ್ರದೇಶದಲ್ಲಿ ಭಾನುವಾರ ಮಧ್ಯರಾತ್ರಿ ನಡೆದ ಎನ್ಕೌಂಟರ್ನಲ್ಲಿ ಹತ್ಯೆಯಾದ ಮೂವರು ಉಗ್ರರಲ್ಲಿ ಮೊಹಮ್ಮದ್ ಭಾಯ್ (23) ಕೂಡ ಸೇರಿದ್ದಾನೆ ಎಂದು ತಿಳಿಸಿದ್ದಾರೆ.
ಉಗ್ರರು ಅಡಗಿರುವ ಬಗ್ಗೆ ಬಗ್ಗೆ ಗುಪ್ತಚರರಿಂಗ ಮಾಹಿತಿ ಪಡೆದ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಇದರ ಸುಳಿವು ಪಡೆದ ಉಗ್ರರು ಗುಂಡಿನ ದಾಳಿ ನಡೆಸಿದಾಗ ಯೋಧರು ಎನ್ಕೌಂಟರ್ ಕಾರ್ಯಾಚರಣೆ ನಡೆಸಿದ್ದಾರೆ
ಮೊಹಮ್ಮದ್ ಭಾಯ್ ಎಂದು ಪುಲ್ವಾಮಾ ಜಿಲ್ಲೆಯ ಪದವೀಧರನಾಗಿದ್ದು ಎಲೆಕ್ಟ್ರಿಷಿಯನ್ ಕೆಲಸ ಮಾಡಿಕೊಂಡಿದ್ದ ಈ ಪಾತಕಿಯೇ ದಾಳಿಗೆ ಬಳಸಲಾದ ಮಾರುತಿ ಇಕೋ ಕಾರು ಹಾಗೂ ಭಾರಿ ಪ್ರಮಾಣದ ಆರ್ ಡಿಎಕ್ಸ್ ಪೂರೈಕೆ ಮಾಡಿದ್ದ ಎಂಬುದನ್ನು ಭದ್ರತಾ ಅಧಿಕಾರಿಗಳ ತಂಡ ಪತ್ತೆ ಮಾಡಿದೆ. 2017ರಲ್ಲಿ ಜೈಷೆ ಉಗ್ರ ಸಂಘಟನೆ ಸೇರಿದ ಅಹ್ಮದ್ ಖಾನ್ ಕಮಾಂಡರ್ ನೂರ್ ಮೊಹಮ್ಮದ್ ತಂತ್ರೆ ಅಲಿಯಾಸ್ ‘ನೂರ್ ತ್ರಾಲಿ’ ಜತೆ ಸೇರಿಕೊಂಡು ಹಲವು ಉಗ್ರ ಕೃತ್ಯಗಳನ್ನು ನಡೆಸಿದ್ದ.
ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ಪುನರುಜ್ಜೀವನಕ್ಕೆ ನೆರವಾಗಿದ್ದವನೇ ‘ನೂರ್ ತ್ರಾಲಿ’ ಎಂದು ನಂಬಲಾಗಿದೆ. 2018ರಲ್ಲಿ ಲೆಥಪೋರಾದ ಸಿಆರ್ಪಿಎಫ್ ಶಿಬಿರದ ಮೇಲೆ ನಡೆದ ಉಗ್ರ ದಾಳಿಯಲ್ಲೂ ಈತನ ಕೈವಾಡವಿದೆ ಎಂದು ಅಧಿಕಾರಿಗಳ ತಂಡ ಹೇಳಿದೆ. ಇನ್ನು ಆತ್ಮಹತ್ಯಾ ಬಾಂಬ್ ದಾಳಿಕೋರ ಆದಿಲ್ ಮತ್ತು ಮೊಹಮ್ಮದ್ ಭಾಯ್ ಜತೆಗೆ ನಿರಂತರ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ.
6 top commanders among 14 JeM terrorists killed since Pulwama attack