ಜೈಷ್​ ಎ ಮೊಹಮ್ಮದ್​ ಮುಖ್ಯಸ್ಥ ಮಸೂದ್ ಅಜರ್ ಜೀವಂತವಾಗಿದ್ದಾನೆ

ಶ್ರೀನಗರ: ಜೈಷ್​ ಎ ಮೊಹಮ್ಮದ್​ ಮುಖ್ಯಸ್ಥ ಉಗ್ರ ಮಸೂದ್​ ಅಜರ್​ ಜೀವಂತವಾಗಿದ್ದಾನೆ. ಆತನನ್ನು ಭಹವಾಲ್​ಪುರದ ಗೋತ್​ ಘನ್ನಿಯಲ್ಲಿರುವ ಜೈಷ್​ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಭಾರತೀಯ ಬೇಹುಗಾರಿಕಾ ಪಡೆ ಸಿಬ್ಬಂದಿ ಮಾಹಿತಿ ಸಂಗ್ರಹಿಸಿದ್ದಾರೆ.

ಜೈಷ್ ಉಗ್ರ ಮಸೂದ್ ಅಜರ್ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ಪ್ರಸಾರವಾಗಿತ್ತು. ಈ ಹಿನ್ನಲೆಯಲ್ಲಿ ಮಾಹಿತಿ ಸಂಗ್ರಹಿಸಿರುವ ಬೇಹುಗಾರಿಕಾ ಪಡೆ, ಮಸೂದ್ ಅಜರ್, ಮೂತ್ರಪಿಂಡ ವೈಫಲ್ಯದ ಸಮಸ್ಯೆಯಿಂದ ಬಳಲುತ್ತಿದ್ದು, ಆತನಿಗೆ ರಾವಲ್ಪಿಂಡಿ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಭಾನುವಾರ ರಾತ್ರಿ 7.30ಕ್ಕೆ ಆತನನ್ನು ಭಹವಾಲ್​ಪುರದ ಗೋತ್​ ಘನ್ನಿಯಲ್ಲಿರುವ ಜೈಷ್​ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದೆ.

ಉಗ್ರ ಮಸೂದ್​ ಅಜರ್​ ಬಾಲಾಕೋಟ್​ ಮೇಲಿನ ಭಾರತೀಯ ವಾಯುಪಡೆಯ ದಾಳಿ ಸಂದರ್ಭದಲ್ಲಿ ಮೃತಪಟ್ಟಿರಬಹುದು. ಇಲ್ಲವೇ ಮೂತ್ರಪಿಂಡ ವೈಫಲ್ಯದ ಸಮಸ್ಯೆಯಿಂದ ರಾವಲ್ಪಿಂಡಿ ಸೇನಾ ಆಸ್ಪತ್ರೆಯಲ್ಲಿ ಮೃತಪಟ್ಟಿರಬಹುದು ಎಂಬ ವದಂತಿ ದಟ್ಟವಾಗಿ ಹಬ್ಬಿದ್ದವು. ಆದರೆ ಪಾಕಿಸ್ತಾನ ಸರ್ಕಾರವಾಗಲಿ ಅಥವಾ ಅಲ್ಲಿನ ಮಾಧ್ಯಮಗಳಾಗಲಿ ಅದನ್ನು ಖಚಿತಪಡಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಭಾರತೀಯ ಬೇಹುಗಾರಿಕಾ ಪಡೆ ಸಿಬ್ಬಂದಿ ಅಜರ್​ ಸಾವಿನ ಕುರಿತು ಮಾಹಿತಿ ಸಂಗ್ರಹಿಸಲು ಮುಂದಾಗಿದ್ದರು.

Pakistan moves Masood Azhar out of army hospital, he is alive

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ