ಶ್ರೀನಗರ: ಜೈಷ್ ಎ ಮೊಹಮ್ಮದ್ ಮುಖ್ಯಸ್ಥ ಉಗ್ರ ಮಸೂದ್ ಅಜರ್ ಜೀವಂತವಾಗಿದ್ದಾನೆ. ಆತನನ್ನು ಭಹವಾಲ್ಪುರದ ಗೋತ್ ಘನ್ನಿಯಲ್ಲಿರುವ ಜೈಷ್ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಭಾರತೀಯ ಬೇಹುಗಾರಿಕಾ ಪಡೆ ಸಿಬ್ಬಂದಿ ಮಾಹಿತಿ ಸಂಗ್ರಹಿಸಿದ್ದಾರೆ.
ಜೈಷ್ ಉಗ್ರ ಮಸೂದ್ ಅಜರ್ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ಪ್ರಸಾರವಾಗಿತ್ತು. ಈ ಹಿನ್ನಲೆಯಲ್ಲಿ ಮಾಹಿತಿ ಸಂಗ್ರಹಿಸಿರುವ ಬೇಹುಗಾರಿಕಾ ಪಡೆ, ಮಸೂದ್ ಅಜರ್, ಮೂತ್ರಪಿಂಡ ವೈಫಲ್ಯದ ಸಮಸ್ಯೆಯಿಂದ ಬಳಲುತ್ತಿದ್ದು, ಆತನಿಗೆ ರಾವಲ್ಪಿಂಡಿ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಭಾನುವಾರ ರಾತ್ರಿ 7.30ಕ್ಕೆ ಆತನನ್ನು ಭಹವಾಲ್ಪುರದ ಗೋತ್ ಘನ್ನಿಯಲ್ಲಿರುವ ಜೈಷ್ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದೆ.
ಉಗ್ರ ಮಸೂದ್ ಅಜರ್ ಬಾಲಾಕೋಟ್ ಮೇಲಿನ ಭಾರತೀಯ ವಾಯುಪಡೆಯ ದಾಳಿ ಸಂದರ್ಭದಲ್ಲಿ ಮೃತಪಟ್ಟಿರಬಹುದು. ಇಲ್ಲವೇ ಮೂತ್ರಪಿಂಡ ವೈಫಲ್ಯದ ಸಮಸ್ಯೆಯಿಂದ ರಾವಲ್ಪಿಂಡಿ ಸೇನಾ ಆಸ್ಪತ್ರೆಯಲ್ಲಿ ಮೃತಪಟ್ಟಿರಬಹುದು ಎಂಬ ವದಂತಿ ದಟ್ಟವಾಗಿ ಹಬ್ಬಿದ್ದವು. ಆದರೆ ಪಾಕಿಸ್ತಾನ ಸರ್ಕಾರವಾಗಲಿ ಅಥವಾ ಅಲ್ಲಿನ ಮಾಧ್ಯಮಗಳಾಗಲಿ ಅದನ್ನು ಖಚಿತಪಡಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಭಾರತೀಯ ಬೇಹುಗಾರಿಕಾ ಪಡೆ ಸಿಬ್ಬಂದಿ ಅಜರ್ ಸಾವಿನ ಕುರಿತು ಮಾಹಿತಿ ಸಂಗ್ರಹಿಸಲು ಮುಂದಾಗಿದ್ದರು.
Pakistan moves Masood Azhar out of army hospital, he is alive