ಮೈಸೂರು-ಬೆಂಗಳೂರು ನಡುವೆ 10 ಪಥಗಳ ರಸ್ತೆ-ಸ್ಥಳ ಪರಿಶೀಲನೆ ನಡೆಸಿದ ಸಂಸದ ಪ್ರತಾಪ್‍ಸಿಂಹ

ಮೈಸೂರು, ಮಾ.3- ಮೈಸೂರು-ಬೆಂಗಳೂರು ನಡುವೆ ನಿರ್ಮಿಸಲು ಉದ್ದೇಶಿಸಿರುವ 10ಪಥಗಳ ರಸ್ತೆಗೆ ಸ್ಥಳ ಪರಿಶೀಲನೆಯನ್ನು ಸಂಸದ ಪ್ರತಾಪ್‍ಸಿಂಹ ನಡೆಸಿದರು.

ಶ್ರೀರಂಗಪಟ್ಟಣ ಸಮೀಪ ಗಣಂಗೂರು ಬಳಿ ಸ್ಥಳ ವೀಕ್ಷಣೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು ಮೈಸೂರು-ಬೆಂಗಳೂರು ನಡುವೆ ಈಗ ನೂರ ಹದಿನೆಂಟು ಕಿ.ಮೀ ದೂರ ಇದೆ. ಇದನ್ನು ಕ್ರಮಿಸಲು ವಾಹನಗಳಿಗೆ ಮೂರು ಗಂಟೆ ಬೇಕಾಗುತ್ತಿದೆ. 10ಪಥಗಳ ರಸ್ತೆ ನಿರ್ಮಾಣವಾದ ನಂತರ ಕೇವಲ ಒಂದೂವರೆ ಗಂಟೆಯಲ್ಲಿ ಮೈಸೂರಿನಿಂದ ಬೆಂಗಳೂರು ತಲುಪಬಹುದು ಎಂದು ಹೇಳಿದರು.

ಎರಡು ಸ್ಥಳಗಳಿಂದ ಕಾಮಗಾರಿಯನ್ನು ಆರಂಭಿಸಲಾಗುತ್ತದೆ. ನಿಡಘಟ್ಟದಿಂದ ಮೈಸೂರು-ಬೆಂಗಳೂರಿನಿಂದ ಪಂಚಮುಖ ದೇವಸ್ಥಾನದಿಂದ ಆರಂಭಿಸಲಾಗುತ್ತದೆ. ಈ ರಸ್ತೆಗಾಗಿ ಶೇ. 80ರಷ್ಟು ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದಕ್ಕೆ ಒಟ್ಟು 7400ಕೋಟಿ ವೆಚ್ಚದ ಯೋಜನೆ ಇದಾಗಿದೆ ಎಂದು ಪ್ರತಾಪ್‍ಸಿಂಹ ಹೇಳಿದರು.

ಕೇಂದ್ರ ಭೂ ಸಾರಿಗೆ ಇಲಾಖೆಯ ಇಂಜಿನಿಯರ್ ಶ್ರೀಧರ ಮತ್ತಿತರರು ಈ ವೇಳೆ ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ