ಇಸ್ಲಾಮಾಬಾದ್: ಭಾರತೀಯ ವಾಯುಪಡೆ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಬಿಡುಗಡೆಗೆ ತಡೆ ಕೋರಿ ಪಾಕ್ ಸಾಮಾಜಿಕ ಕಾರ್ಯಕರ್ತನೊಬ್ಬ ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ಅಭಿನಂದನ್ ಬಿಡುಗಡೆ ಮಾಡುತ್ತಿರುವ ಔಚಿತ್ಯ ಏನು ಎಂದು ಪ್ರಶ್ನಿಸಿ, ಬಿಡುಗಡೆಗೆ ತಡೆಕೋರಿ ಪಾಕಿಸ್ತಾನ ಸಾಮಾಜಿಕ ಕಾರ್ಯಕರ್ತ ಇಸ್ಲಾಮಾಬಾದ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ ಅಭಿನಂದನ್ ಬಿಡಿಗಡೆ ಹಾದಿ ಸುಗಮಗೊಳಿಸಿದೆ.
ಭಾರತೀಯ ವಾಯುಗಡಿ ಪ್ರವೇಶಿಸಿದ್ದ ಪಾಕಿಸ್ತಾನದ ಎಫ್16 ಯುದ್ಧವಿಮಾನಗಳನ್ನು ರಷ್ಯಾ ನಿರ್ಮಿತ ಮಿಗ್-21 ಬೈಸನ್ ಜೆಟ್ ಯುದ್ಧವಿಮಾನದಲ್ಲಿ ಬೆನ್ನಟ್ಟಿ ಹೋಗಿದ್ದ ಅಭಿನಂದನ್, ಒಂದು ವಿಮಾನವನ್ನು ಹೊಡೆದುರುಳಿಸಿದ್ದರು. ತಮ್ಮ ವಿಮಾನದ ಮೇಲೆ ದಾಳಿ ನಡೆದು, ಅದು ಹಾನಿಗೊಂಡಿದ್ದನ್ನು ಗಮನಿಸಿದ್ದ ಅವರು ವಿಮಾನದಿಂದ ಜಿಗಿದಿದ್ದರು. ದುರದೃಷ್ಟವಶಾತ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇಳಿದಿದ್ದ ಅವರನ್ನು ಪಾಕ್ ಸೇನಾಪಡೆ ಸಿಬ್ಬಂದಿ ವಶಕ್ಕೆ ಪಡೆದಿದ್ದರು.
ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಿದ್ದರಿಂದ ಹಾಗೂ ಜಿನೀವಾ ಒಪ್ಪಂದದ ಪ್ರಕಾರ ಅಭಿನಂದನ್ ಅವರನ್ನು ಬಿಡುಗಡೆ ಮಾಡುವ ಅನಿವಾರ್ಯತೆಗೆ ಸಿಲುಕಿದ್ದ ಪಾಕಿಸ್ತಾನ ಅಭಿನಂದನ್ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿತ್ತು.
Pakistan activist,PIL,Dismissed, Wing Commander Abhinandan Varthaman