ಪಾಕ್ ಪರ ಬೇಹುಗಾರಿಕೆ ಮಾಡುತ್ತಿದ್ದ ಭಾರತೀಯನ ಬಂಧನ

ನವದೆಹಲಿ: ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಪರವಾಗಿ ಬೇಹುಗಾರಿಕೆ ಮಾಡುತ್ತಿದ್ದ ಭಾರತೀಯನೊಬ್ಬನನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ಬಂಧಿಸಿದ್ದಾರೆ.

ಬಂಧಿತನನ್ನು ಉತ್ತರ ಪ್ರದೇಶದ ಮೊರಾದಾಬಾದ್​ ಮೂಲದವನು ಎಂದು ತಿಳಿದುಬಂದಿದೆ. ಈತನ ಬಳಿ ಪಾಕಿಸ್ತಾನದ ಮೊಬೈಲ್​ ಫೋನ್​, ಪಾಕಿಸ್ತಾನಿ ಸಿಮ್​ ಕಾರ್ಡ್​ ಸಿಕ್ಕಿದೆ. ಈ ಸಂಖ್ಯೆಯು ಪಾಕಿಸ್ತಾನದ 8 ವಾಟ್ಸ್​ಆ್ಯಪ್​ ಗ್ರೂಪ್​ಗಳಿಗೆ ಜೋಡಣೆಗೊಂಡಿತ್ತು. ಜತೆಗೆ ಈತನ ಬಳಿ ಪಾಕಿಸ್ತಾನದ 6 ಸಿಮ್​ಗಳು ಸಿಕ್ಕಿರುವುದಾಗಿ ತಿಳಿದುಬಂದಿದೆ.

ಪಂಜಾಬ್​ನ ಫಿರೋಜ್​ಪುರ್​ ಬಳಿಯ ಅಂತರಾಷ್ಟ್ರೀಯ ಗಡಿಯಲ್ಲಿ ಈತ ಬೇಹುಗಾರಿಕೆ ಮಾಡುತ್ತಿದ್ದ ಎನ್ನಲಾಗಿದೆ. ಗಡಿ ಭದ್ರತಾ ಪಡೆ ನಿಯೋಜನೆ ಸೇರಿ ಗಡಿ ಪ್ರದೇಶದಲ್ಲಿನ ಸೇನಾ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಸಂಗ್ರಹಿಸಿ ಪಾಕಿಸ್ತಾನದ ತನ್ನ ಸಂಪರ್ಕಗಳಿಗೆ ಒದಗಿಸುತ್ತಿದ್ದ ಎಂದು ಹೇಳಲಾಗಿದೆ.

BSF in Ferozepur Arrested An Indian National Near Border OutPost

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ