ಶತ್ರು ರಾಷ್ಟ್ರಕ್ಕೆ ಭಾರತದ ಗೌಪ್ಯ ಮಾಹಿತಿ ಸಿಕ್ಕಿಬಿಡುತ್ತವೆಂದು ದಾಖಲೆಗಳನ್ನು ನೀರಲ್ಲಿ ಅದ್ದಿ, ಕೆಲವನ್ನು ಜಗಿದು ನುಂಗಿದ ಅಭಿನಂದನ್

ನವದೆಹಲಿ: ಪಾಕಿಸ್ತಾನ ವಶದಲ್ಲಿರುವ ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್, ತನ್ನ ಬಳಿಯಿದ್ದ ಭಾರತದ ಕುರಿತ ಮಾಹಿತಿ, ದಾಖಲೆಗಳು ಶತ್ರುರಾಷ್ಟ್ರ ಪಾಕಿಸಿಸ್ತಾನಕ್ಕೆ ಸಿಗಬಾರದೆಂದು, ಅವುಗಳಲ್ಲಿ ಕೆಲವೊಂದನ್ನು ಜಗಿದು ನುಂಗಿದರೆ, ಇನ್ನು ಕೆಲ ಗೌಪ್ಯ ಮಾಹಿತಿಗಳನ್ನು ನೀರಿನಲ್ಲಿ ಅದ್ದಿ ನಾಶಪಡಿಸಿದ್ದಾರೆ.

ಪಾಕಿಸ್ತಾನ ವಾಯುಪಡೆಗೆ ಸೇರಿದ ಎಫ್​ 16 ಯುದ್ಧ ವಿಮಾನ ಹೊಡೆದುರುಳಿಸಿದ ಅಭಿನಂದನ್ ಇದ್ದ ಯುದ್ಧವಿಮಾನವನ್ನು ಪಾಕ್​ ಹೊಡೆದುರುಳಿಸಿತ್ತು.

ವಿಮಾನದಿಂದ ಹೊರಜಿಗಿದ ಅಭಿನಂದನ್​ ಅವರನ್ನು ಪಾಕ್​ ಸೇನೆ ಬಂಧಿಸಿದೆ. ಈ ವೇಳೆ​ ಅಭಿನಂದನ್​ ಅವರು ಶತ್ರು ರಾಷ್ಟ್ರಕ್ಕೆ ಭಾರತದ ಗೌಪ್ಯ ಮಾಹಿತಿಗಳು ಸಿಕ್ಕಿಬಿಡುತ್ತವೆ ಎಂದು ಅದನ್ನು ಜಗಿದು ನುಂಗಿರುವುದಾಗಿ ಪತ್ರಿಕೆ ವರದಿ ಮಾಡಿದೆ.

ಅಭಿನಂದನ್​ ಅವರು ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಸಿಕ್ಕಬಿದ್ದಾಗ ತಾವು ಎಲ್ಲಿದ್ದೇವೆಂದು ಅಲ್ಲಿದ್ದ ಯುವಕರನ್ನು ಕೇಳಿದ್ದರು. ಅವರು ಇದು ಭಾರತ ಎಂದು ಹೇಳಿದರು. ಅಲ್ಲಿದ್ದ ಕೆಲವರು ಪಾಕಿಸ್ತಾನ್​ ಜಿಂದಾಬಾದ್​ ಎಂದು ಘೋಷಣೆ ಕೂಗಿ ಅವರ ಮೇಲೆ ಹಲ್ಲೆ ಮಾಡಲು ಮುಂದಾದರು. ಪರಿಸ್ಥಿತಿಯನ್ನು ಅರಿತ ಅಭಿನಂದನ್​ ತಮ್ಮ ಬಂದೂಕು ತೆಗೆದು ಗಾಳಿಯಲ್ಲಿ ಗುಂಡು ಹಾರಿಸಿದರು ಎಂದು ಡಾನ್​ ಪತ್ರಿಕೆ ವರದಿಮಾಡಿದೆ.

ಅಷ್ಟರಲ್ಲಿ ಯುವಕರ ಗುಂಪಿನಲ್ಲಿ ಒಬ್ಬ ಅಭಿನಂದನ್​ ಮೇಲೆ ಕಲ್ಲು ತೂರಿದ. ಗನ್​ ತೋರಿಸಿ ಬೆದರಿಸಿ ಅರ್ಧ ಕಿ.ಮೀ. ಹಿಮ್ಮುಕವಾಗಿ ಓಡಿದರು. ಹೀಗೆ ಓಡುವಾಗ ಒಂದು ಕೊಳದಲ್ಲಿ ಬಚ್ಚಿಟ್ಟುಕೊಂಡು ತಮ್ಮ ಬಳಿ ಇದ್ದ ಗೌಪ್ಯ ದಾಖಲೆಗಳ ಪೈಕಿ ಕೆಲವನ್ನು ನೀರಿನಲ್ಲಿ ಅದ್ದಿ, ಇನ್ನೂ ಕೆಲವನ್ನು ಜಗಿದು ನುಂಗಿ ನಾಶಗೊಳಿಸಿದ್ದಾರೆ ಎಂದು ತಿಳಿಸಿದೆ.

Wing Commander Abhinandan tried to swallow documents after realising he was in PoK

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ