ಮುಂಬೈ: ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ದಮಾನ್ ಸುರಕ್ಷಿತವಾಗಿ ವಾಪಸ್ ಬರುವ ವಿಶ್ವಾಸವಿದೆ ಎಂದು ಅಭಿನಂದನ್ ತಂದೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತೀಯ ವಾಯು ಪಡೆಯಲ್ಲಿ ಏರ್ ಮಾರ್ಷಲ್ ಆಗಿದ್ದು, ಈಗ ನಿವೃತ್ತರಾಗಿರುವ ಎಸ್. ವರ್ದಮಾನ್ ಅವರು ಅಭಿನಂದನ್ ಸೆರೆ ಸಿಕ್ಕಿದ್ದರೂ ಒಬ್ಬ ನಿಜವಾದ ಯೋಧನಂತೆ ವರ್ತಿಸುತ್ತಿದ್ದಾರೆ. ಪಾಕ್ ಮಾಧ್ಯಮಗಳಲ್ಲಿ ಬಿಡುಗಡೆಯಾಗಿರುವ ವಿಡಿಯೋವನ್ನು ನೋಡಿದಾಗ ಇದು ಸ್ಪಷ್ಟವಾಗುತ್ತದೆ. ಪಾಕ್ ನೆಲದಲ್ಲಿ ಯಾವುದೇ ಸಮಸ್ಯೆಯಾಗದೆ ನನ್ನ ಪುತ್ರ ಸ್ವದೇಶಕ್ಕೆ ಮರಳುತ್ತಾರೆ. ನನಗೆ ಆತನ ಬಗ್ಗೆ ಹೆಮ್ಮೆಯಿದೆ ಎಂದು ತಿಳಿಸಿದ್ದಾರೆ.
ಈ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಕುಟುಂಬಕ್ಕೆ ಬೆಂಬಲ ಸೂಚಿಸುತ್ತಿರುವ ಹಾಗೂ ಅಭಿನಂದನ್ ಬಿಡುಗಡೆಗಾಗಿ ಪ್ರಾರ್ಥಿಸುತ್ತಿರುವ ಎಲ್ಲರಿಗೂ ನಾನು ಆಭಾರಿ. ನಿಮ್ಮ ಬೆಂಬಲವೇ ನಮಗೆ ಕಠಿಣ ಸಂದರ್ಭವನ್ನು ಎದುರಿಸಲು ಧೈರ್ಯ ನೀಡುತ್ತಿದೆ ಎಂದು ಅವರು ತಿಳಿಸಿದ್ದಾರೆ.
Hope he returns home safe: Father of IAF pilot held by Pakistan