ಮೌಲಾನಾ ಮಸೂದ್ ಮಟ್ಟ ಹಾಕಲು ಪ್ರಾನ್ಸ್ ಸಜ್ಜು

ವಿಶ್ವ ಸಂಸ್ಥೆ, ಫೆ.27- ಜೈಷ್-ಎ-ಮಹಮ್ಮದ್ ಉಗ್ರಗಾಮಿ ಸಂಘಟನೆಯ ನಾಯಕ ಮೌಲಾನಾ ಮಸೂದ್ ಅಜ್ಹರ್‍ನನ್ನು ವ್ಯವಸ್ಥಿತವಾಗಿ ಮಟ್ಟ ಹಾಕಲು ಪರಮಾಪ್ತ ಮಿತ್ರ ರಾಷ್ಟ್ರ ಫ್ರಾನ್ಸ್ ಸಜ್ಜಾಗಿದೆ.

ಮುಂದಿನ ತಿಂಗಳು ಫ್ರಾನ್ಸ್ ವಿಶ್ವ ಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಅಲಂಕರಿಸಲಿದ್ದು ಅಜ್ಹರ್‍ನನ್ನು ಅಂತಾರಾಷ್ಟ್ರೀಯ ಕುಖ್ಯಾತ ಭಯೋತ್ಪಾದಕ ಎಂದು ಘೋಷಿಸಲು ಮತ್ತು ಆತನ ವಿರುದ್ಧ ಕಟ್ಟುನಿಟ್ಟಿ ಕ್ರಮ ಕೈಗೊಳ್ಳಲು ಪ್ರಸ್ತಾಪನೆ ಮಂಡಿಸಿ ಮಂಜೂರಾತಿ ಸಮಿತಿಗೆ ಸಲ್ಲಿಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ