ಇಬ್ಬರು ಉಗ್ರರನ್ನು ಬಂಧಿಸಿದ ಕಲ್ಕತಾ ಪೊಲೀಸರು

ಕಲ್ಕತಾ, ಫೆ.27- ಜಮೀತ್-ಉಲ್-ಮುಜಾಹಿದ್ದೀನ್ ದೇಶದ ಉಗ್ರ ಸಂಘಟನೆಯ ಇಬ್ಬರು ಉಗ್ರರನ್ನೇ ಪಶ್ಚಿಮ ಬಂಗಾಳದ ಮುಷೀರ್‍ಬಾದ್ ಜಿಲ್ಲೆಯಲ್ಲಿ ಕಲ್ಕತ ಪೊಲೀಸರು ಬಂದಿಸಿದ್ದಾರೆ.

ಬಂಧಿತ ಇಬ್ಬರು ಉಗ್ರರಿಂದ ಅಲ್ಯೂಮಿನಿಯಂ ಪೈಪ್ ಸಲ್ಫ್‍ರಿಕ್ ಆ್ಯಸಿಡ್ ಸೇರಿದಂತೆ ಅಪಾರ ಪ್ರಮಾಣದ ಸ್ಫೋಟಕಗಳು ಹಾಗು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಡರಾತ್ರಿ ವಿಶೇಷ ರ್ಫೋರ್ಸ್ ಮತ್ತು ಕಲ್ಕತ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸುವ ವೇಳೆ ಗಸ್ತು ತಿರುಗುತ್ತಿದ್ದ ಮಾಷಿಬರ್ ರೆಹಮಾನ್(35), ಅಲಿಯಾಸ್ ಫ್ರಾಕಲ್ಯ ಮತ್ತು ರಾಹುಲ್ ಅನಿಮ್ ಅಲಿಯಾಸ್ ಸೈಪೂಲ್(26) ಎಂಬ ಇಬ್ಬರು ಉಗ್ರರನ್ನೇ ಬಂಧಿಸಿದ್ದಾರೆ. ಇವರು ಮೂಲತಹ ಮುಷೀರ್‍ಬಾದ್ ಜಿಲ್ಲೆಯ ನಿವಾಸಿಗಳಾಗಿದ್ದು. ಜೆಎಂಬಿ ಉಗ್ರ ಸಂಘಟನೆಯ ಸದಸ್ಯರಾಗಿ ದೇಶದ್ರೋಹ ಕೆಲಸಗಳನ್ನೇ ಮಾಡುತ್ತಿದದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ