ಭಾರತೀಯ ವಾಯುಪಡೆಯಿಂದ ಉಗ್ರಗಾಮಿ ಶಿಬಿರಗಳ ಧ್ವಂಸ-ವಿಶ್ವಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಚಾರ

ಇಸ್ಲಾಮಾಬಾದ್, ಫೆ.27-ಪುಲ್ವಾಮ ಆತ್ಮಾಹುತಿ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆಯು ನಿನ್ನೆ ಮುಂಜಾನೆ ಪಾಕಿಸ್ತಾನದ ಗಡಿಪ್ರದೇಶದೊಳಗೆ ನುಗ್ಗಿ ಏರ್ ಸ್ಟ್ರೈಕ್ ನಡೆಸಿ ಜೈಶ್ ಸಹಿತ ಇತರ ಸಂಘಟನೆಗಳ ಉಗ್ರಗಾಮಿ ಶಿಬಿರಗಳನ್ನು ಧ್ವಂಸಗೊಳಿಸಿರುವ ವಿಚಾರ ಇದೀಗ ವಿಶ್ವಪಟ್ಟದಲ್ಲಿ ಚರ್ಚೆಯಾಗುತ್ತಿದೆ.

ಪಾಕಿಸ್ಥಾನದ ಕೃಪಾಶ್ರಯದಲ್ಲಿರುವ ಜೈಶ್-ಎ-ಮಹಮ್ಮದ್ ಮುಖ್ಯಸ್ಥ ಮೌಲಾನ ಮಸೂದ್ ಅಜ್ಹರ್ ಭಾರತ ನಡೆಸಿದ ವಾಯುದಾಳಿಯನ್ನು ಒಪ್ಪಿಕೊಳ್ಳುವ ಮೂಲಕ ತನ್ನ ಆಶ್ರಯದಾತ ರಾಷ್ಟ್ರಕ್ಕೆ ಕಸಿವಿಸಿ ಉಂಟು ಮಾಡಿದ್ದಾನೆ.

ಬಾಲಾಕೋಟ್‍ನಲ್ಲಿರುವ ಉಗ್ರ ಶಿಬಿರಗಳ ಮೇಲೆ ಭಾರತ ವಾಯುದಾಳಿ ಮಾಡಿರುವುದು ನಿಜ ಆದರೆ ಈ ದಾಳಿಯಿಂದ ಯಾವುದೇ ರೀತಿಯ ಗಂಭೀರ ಹಾನಿಗಳಾಗಿಲ್ಲ ಎಂದು ಪಾಕಿಸ್ಥಾನದ ಮುಖ ಉಳಿಸಿಕೊಳ್ಳುವ ಹೇಳಿಕೆ ನೀಡಿದ್ದಾನೆ.

ಈ ವಾಯುದಾಳಿಯಲ್ಲಿ ಮೌಲಾನ ಅಮ್ಮರ್, ಮೌಲಾನ ತಲ್ಹಾ ಸೈಫ್, ಮುಫ್ತಿ ಅಜ್ಹರ್ ಖಾನ್ ಕಾಶ್ಮೀರಿ ಮತ್ತು ಇಬ್ರಾಹಿಂ ಅಜ್ಹï ಸಹಿತ 300ಕ್ಕೂ ಹೆಚ್ಚು ಉಗ್ರರು ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ.ಯೋಜಿತ ದಾಳಿಯ ಮೂಲಕ ಭಾರತೀಯ ವಾಯುಸೇನೆಯು ಪಾಕಿಸ್ಥಾನ ಮತ್ತು ಜೈಶ್ ಸಹಿತ ಪಾಕ್ ಪೋಷಿತ ಉಗ್ರ ಸಂಘಟನೆಗಳಿಗೆ ಭರ್ಜರಿ ಹೊಡೆತ ನೀಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ