ಚುರು: ಎಲ್ ಒಸಿ ದಾತಿ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ್ದು, ಸೇನೆ ಉಗ್ರರಿಗೆ ತಕ್ಕ ಉತ್ತರ ನೀಡಿದೆ. ಇಂದಿನ ದಿನ ವಿಶೇಶವಾದ ಹಾಗೂ ಮಹತ್ವವಾದ ದಿನವಾಗಿದೆ. ಸೇನೆಯ ಕೆಲಸಕ್ಕೆ ನನ್ನ ಅಭಿನಂದನೆಗಳು. ನಾವೆಲ್ಲರೂ ಪರಾಕ್ರಮಿ ಯೋಧರಿಗೆ ನಮನ ಸಲ್ಲಿಸೋಣ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ರಾಜಸ್ಥಾನದ ಚುರುವಿನಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ದೇಶ ತಲೆಬಾಗಲು ಬಿಡುವುದಿಲ್ಲ; ದೇಶದ ಪ್ರತಿಯೊಬ್ಬರೂ ಗೆಲ್ಲುತ್ತಾರೆ . ಈ ದೇಶ ಸುರಕ್ಷಿತವಾದ ಕೈಗಳಲ್ಲಿದೆ. ಭಾರತಮಾತೆ ತಲೆಬಾಗಲು ನಾನು ಎಂದಿಗೂ ಬಿಡುವುದಿಲ್ಲ. ದೇಶಕ್ಕಿಂತ ದೊಡ್ದದು ನನಗೆ ಯವುದೂ ಇಲ್ಲ. ಈ ವೇಳೆ ದೇಶದ ಜನರಿಗೆ ನಾನು ಭರವಸೆಯನ್ನು ನೀಡಲು ಬಯಸುತ್ತೇನೆ ದೇಶ ಸುರಕ್ಷಿತವಾದ ಕೈಗಳಲ್ಲಿದೆ . ಮೋದಿ ಸರ್ಕಾರದಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದು ಹೇಳಿದರು.
2014ರಲ್ಲಿ ಸದೃಢ ಸರ್ಕಾರವನ್ನು ಸ್ಥಾಪಿಸಿದ್ದೆವು. ಈ ಸದೃಢ ಸರ್ಕಾರದ ತಾಕತ್ತನ್ನು ಇಡೀ ಪ್ರಪಂಚ ನೋಡುತ್ತಿದೆ. ನಿಮಗೂ ಈ ಶಕ್ತಿ ಕಾಣಿಸಿಕೊಳ್ಳಬೇಕಿದೆ. ನಿಮ್ಮ ಒಂದು ವೋಟ್ ತಾಕತ್ತಿನಿಂದ ಇಂದು ಇದೆಲ್ಲ ಸಾಧ್ಯವಾಗಿದೆ ಎಂದು ಪ್ರಧಾನಿ ತಿಳಿಸಿದರು.
Indian Air Force strike,Prime Minister Narendra Modi,country is in safe hands,Rajasthan,Churu,Rally