ಜಮ್ಮು-ಕಾಶ್ಮೀರದಲ್ಲಿ ಇನ್ನಷ್ಟು ಹೆಚ್ಚಿದ ಭದ್ರತೆ: ನೂರು ಅರೆಸೇನಾ ತುಕಡಿಗಳ ನಿಯೋಜನೆ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಭದ್ರತೆಯನ್ನು ಹೆಚ್ಚಿಸಿದ್ದು, ಇಂದು ನೂರು ತುಕಡಿ ಅರೆಸೈನಿಕ ಪಡೆಯನ್ನು ಶ್ರೀನಗರಕ್ಕೆ ಕಳಿಸಿದೆ.

ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ಬಳಿಕ ಜಮ್ಮು-ಕಾಶ್ಮೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಇಂದು ಕೇಂದ್ರ ಸರ್ಕಾರ ಮತ್ತಷ್ಟು ಭದ್ರತೆ ಹೆಚ್ಚಿಸಿದೆ. ರಾಜ್ಯದಲ್ಲಿ ಅಲ್ಲಿನ ಭದ್ರತಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಗೃಹ ಇಲಾಖೆ ಈ ಕ್ರಮ ಕೈಗೊಂಡಿದ್ದು 45 ತುಕಡಿಗಳಷ್ಟು ಸಿಆರ್​ಪಿಎಫ್​, 35 ತುಕಡಿ ಬಿಎಸ್​ಎಫ್​ ಮತ್ತು ತಲಾ 10 ತುಕಡಿಗಳಷ್ಟು ಎಸ್​ಎಸ್​ಬಿ, ಐಟಿಬಿಪಿ ಸಿಬ್ಬಂದಿಯನ್ನು ಹೊಸದಾಗಿ ನಿಯೋಜನೆಗೊಳಿಸಲಾಗಿದೆ.

ಅರೆಸೇನಾಪಡೆಗಳ 100 ತುಕಡಿಗಳಿಂದ ಸುಮಾರು 10,000 ಸೈನಿಕರು ಶ್ರೀನಗರಕ್ಕೆ ತೆರಳಿದ್ದಾರೆ. ಒಂದು ಕಂಪನಿಯಲ್ಲಿ 80 ರಿಂದ 150 ಮಂದಿ ಸೈನಿಕರರಿರುತ್ತಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಜಮ್ಮುಕಾಶ್ಮೀರ ಲಿಬರಲ್​ ಫ್ರಂಟ್​ ಮುಖ್ಯಸ್ಥ ಯಾಸಿನ್​ ಮಲಿಕ್​ ಮತ್ತು ಜಮಾ ತೆ ಇಸ್ಲಾಮಿಯರ ಸುಮಾರು 12 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

Centre moves 100 companies of paramilitary forces to Srinagar amid massive crackdown

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ