ಪುಲ್ವಾಮ ದಾಳಿ ಖಂಡಿಸಿ ಇಡೀ ದೇಶವೇ ಪಾಪಿ ಪಾಕಿಸ್ತಾನ ವಿರುದ್ಧ ಆಕ್ರೋಶ ಹೊರ ಹಾಕುತ್ತಿದೆ. ಕಣಿವೆ ರಾಜ್ಯದಲ್ಲಿ ನಡೆದ ಅತಿ ದೊಡ್ ಇಡೀ ದೇಶವನ್ನ ಬೆಚ್ಚಿ ಬೀಳಿಸಿದೆ. 18 ವರ್ಷದಲ್ಲೆ ಅತಿ ಭೀಕರವಾಗಿರುವ ಈ ದಾಳಿ ಎಲ್ಲ ಭಾರತೀಯರನ್ನ ಕೆರೆಳಿಸಿದೆ. ಮೋಸದಿಂದ ಬಂದು ನಮ್ಮ ವೀರ ಯೋಧರನ್ನ ಕೊಂದು ಪಾಪಿಗಳಿಗೆ ದೇಶದ ಪ್ರತಿಯೊಬ್ಬ ಪ್ರಜೆ ಕೂಡ ಹಿಡಿ ಶಾಪ ಹಾಕುತ್ತಿದ್ದಾನೆ.
ಇತ್ತ ಮಾಡಬಾರದ ಕೆಲಸಗಳೆನ್ನೆಲ್ಲ ಮಾಡಿರುವ ಪಾಪಿ ಪಾಕಿಸ್ತಾನ ಏನು ಆಗಿಯೇ ಇಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದೆ. ಪಾಕಿಸ್ತಾನ ಪ್ರಧಾನಿ ಹಾಗೂ ಮಾಜಿ ಕ್ರಿಕೆಟರ್ ಇಮ್ರಾನ್ ಖಾನ್ ನಮಗೂ ಸಂಬಂಧವಿಲ್ಲ ಅಂತ ಜಾಣ ಮೌನ ತಾಳಿದ್ದಾರೆ.
ಇಮ್ರಾನ್ ಖಾನ್ ಫೋಟೋ ಹೊರಗಿಟ್ಟ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ
ನಿನ್ನೆಯಷ್ಟೆ ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ತನ್ನ ರೆಸ್ಟೋರೆಂಟ್ನಲ್ಲಿದ್ದ ಪಾಕ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಅವರ ಪೋಟೋವನ್ನ ಕಿತ್ತೊಗೆದಿತ್ತು.
ಇಮ್ರಾನ್ ಖಾನ್ ಫೋಟೋ ಕಿತ್ತೊಗೆದಿದಕ್ಕೆ ಉರಿದುಕೊಂಡ ಪಿಸಿಬಿ
ವಿಶ್ವದ ಪ್ರತಿಷ್ಠಿತ ಕ್ರಿಕೆಟ್ ಅಕಾಡೆಮಿಯಲ್ಲೊಂದಾದ ಕ್ರಿಕೆಟ್ ಅಕಾಡೆಮಿ ಆಫ್ ಇಂಡಿಯಾ ಮಾಜಿ ನಾಯಕ ಇಮ್ರಾನ್ ಖಾನ್ ಅವರ ಫೋಟೋವನ್ನ ಕಿತ್ತು ಹಾಕಿದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಿಸಿಬಿ ಉರಿದುಕೊಂಡಿದೆ. ಮಂಡಳಿಗಳ ಸಭೆಯಲ್ಲಿ ಇದರ ಬಗ್ಗೆ ಮಾತನಾಡುವುದಾಗಿ ಹೇಳಿದೆ.
ರಾಜಕೀಯ ಮತ್ತು ಕ್ರೀಡೆಯನ್ನ ಯಾವಗಲೂ ಎರಡನ್ನು ಬೇರೆ ಬೇರೆಯಾಗಿಡಬೇಕು. ಕ್ರೀಡೆ ಅದರಲ್ಲೂ ಕ್ರಿಕೆಟ್ ಜನರು ಮತ್ತು ದೇಶಗಳ ನಡುವೆ ಸೇತುವೆಯಾಗಿರುತ್ತೆ ಅನ್ನೋದನ್ನ ಇತಿಹಾಸ ಯಾವಗಲೂ ಹೇಳುತ್ತೆ . ಐತಿಹಾಸಿಕ ಕ್ಲಬ್ಗಳಲ್ಲಿ ಇಮ್ರಾನ್ ಖಾನ್ ಫೋಟೋಗಳನ್ನ ತೆಗೆದಿದ್ದು ವಿಷಾದನೀಯ ಪಿಸಿಬಿ ಹೇಳಿದೆ.
ಪಿಸಿಬಿಯ ಹೇಳಿಕೆಗೆ ರಾಜೇಶ್ ಶುಕ್ಲಾ ತಿರುಗೇಟು
ಪಿಸಿಬಿ ತನ್ನ ಅಸಮಾಧಾನ ಹೊರ ಹಾಕುತ್ತಿದ್ದಂತೆ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಪಿಸಿಬಿ ಮೇಲೆ ಹರಿಹಾಯ್ದಿದ್ದಾರೆ.
ಇಮ್ರಾನ್ ಖಾನ್ ಫೋಟೋ ಏನು ತೆಗೆದು ಹಾಕಿದ್ದೇವೆ ಅದು ಜನರ ಆಕ್ರೋಶ. ಇದು ನ್ಯಾಯಬದ್ಧವಾಗಿದೆ. ಪಾಕಿಸ್ತಾನ ಪ್ರಾಯೋಜತ್ವದ ಭಯೋತ್ಪಾದನೆ ನಿಲ್ಲುವವರೆಗೂ ಆಡಲು ಸಾಧ್ಯವಿಲ್ಲ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಹೇಳಿದ್ದಾರೆ.
ಪಾಕ್ ಕ್ರಿಕೆಟಿಗರ ಫೋಟೋ ಕಿತ್ತು ಹಾಕಿದ ಪಂಜಾಬ್ ಕ್ರಿಕೆಟ್
ಇಷ್ಟೆ ಅಲ್ಲ ಮೊಹಾಲಿ ಸ್ಟೇಡಿಯಂನಲ್ಲಿದ್ದ ಪಾಕಿಸ್ತಾನಿ ಕ್ರಿಕೆಟಿಗರ ಫೋಟೋಗಳನ್ನು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್(ಪಿಸಿಎ) ತೆಗೆದು ಹಾಕಿದೆ . ಈ ಮೂಲಕ ಪುಲ್ವಾಮ ದುರಂತದಲ್ಲಿ ಮಡಿದ ವೀರ ಯೋಧರ ಕುಟುಂಬಗಳಿಗೆ ಗೌರವ ತೋರಿದ್ದು, ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಪುಲ್ವಾಮಾ ಉಗ್ರರ ದಾಳಿ ಬಗ್ಗೆ ಪ್ರತಿಯೊಬ್ಬ ಭಾರತೀಯನಿಗೂ ಕೋಪವಿದೆ. ಪಿಸಿಎ ಇದಕ್ಕೆ ಹೊರತಾಗಿಲ್ಲ ಅಂತ ಖಜಾಂಚಿ ಅಜಯ್ ತ್ಯಾಗಿ ಹೇಳಿದ್ದಾರೆ.
ಪಿಎಸ್ಎಲ್ ಪಾಲುದಾರಿಕೆಯಿಂದ ಹಿಂದೆ ಸರಿದ ಐಎಂಜಿ-ರಿಲಯನ್ಸ್!
ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿ ಸದ್ಯ ಪಾಕಿಸ್ತಾನ ಸೂಪರ್ ಲೀಗ್ಗೂ ಬಲವಾಗಿ ಬಿಸಿ ತಟ್ಟಿದೆ.ಐಎಂಜಿ-ರಿಲಯನ್ಸ್ ಸಂಸ್ಥೆ ಪಾಕಿಸ್ತಾನ ಸೂಪರ್ ಲೀಗ್ನ ಅಧಿಕೃತ ಉತ್ಪಾದನಾ ಪಾಲುದಾರಿಕೆ ಹೊಂದಿತ್ತು. ಲೀಗ್ನ ನೇರಪ್ರಸಾರಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲ ಹಾಗೂ ಮೂಲ ಸೌಕರ್ಯವನ್ನು ಐಎಂಜಿ-ರಿಲಯನ್ಸ್ ನೀಡುತ್ತಿತ್ತು.ಭಾನುವಾರದಂದು ಐಎಂಜಿ-ರಿಲಯನ್ಸ್ ಸಂಸ್ಥೆ ತಕ್ಷಣದಿಂದ ಅನ್ವಯವಾಗುವಂತೆ ಪಿಎಸ್ಎಲ್ನಲ್ಲಿನ ತನ್ನ ಪಾಲುದಾರಿಕೆಯನ್ನು ಹಿಂಪಡೆದಿದೆ.
ನೆರವಿನ ಹಸ್ತ ಚಾಚಿದ ಡ್ಯಾಶಿಂಗ್ ಓಪನರ್ ಧವನ್
ಉಗ್ರರ ದಾಳಿ ಬಲಿಯಾದ ಸೈನಿಕರ ಕುಟುಂಬಕ್ಕೆ ಶಿಖರ್ ಧವನ್ ನೆರವಿನ ಹಸ್ತ ಚಾಚಿದ್ದಾರೆ. ಅಲ್ಲದೇ ತಮ್ಮ ಅಭಿಮಾನಿಗಳಲ್ಲು ಈ ಬಗ್ಗೆ ಮನವಿ ಮಾಡಿದ್ದಾರೆ.
ಟ್ವೀಟರ್ನಲ್ಲಿ ವಿಡೀಯೋ ಪೋಸ್ಟ್ ಮಾಡಿರುವ ಧವನ್, ಇದೇ ಲಾಸ್ಟ್. ನಮ್ಮ ಕೈಯಿಂದ ಇಷ್ಟೇ ಮಾಡೋಕೆ ಸಾಧ್ಯ ಆಗೋದು. ಎಲ್ಲರು ದಯವಿಟ್ಟು ಯೋಧರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿ. ಭಾರತೀಯ ಸೈನ್ಯದ ಪರವಾಗಿ ನಿಂತುಕೊಳ್ಳಿ ಎಂದು ಕೇಳಿಕೊಂಡಿದ್ದಾರೆ. ಒಟ್ಟಾರೆ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಲು ಭಾರತ ಕ್ರಿಕೆಟ್ ಕೈಜೋಡಿಸಿದ್ದು ಪಾಪಿಗಳಿಗೆ ಇನ್ನು ಬುದ್ದಿ ಕಳಿಸಬೇಕಿದೆ.