ಯಲಹಂಕ ವಾಯುನೆಲೆಯಲ್ಲಿ 2 ಸೂರ್ಯ ಕಿರಣ ಯುದ್ಧ ವಿಮಾನಗಳು ಡಿಕ್ಕಿ; ಓರ್ವ ಪೈಲಟ್ ಸಾವು

ಬೆಂಗಳೂರು: ಏರ್ ಶೋ-2019 ಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದೆ. ವೈಮಾನಿಕ ಪ್ರದರ್ಶನಕ್ಕೆ ಒಂದು ದಿನ ಮಾತ್ರ ಬಾಕಿಯಿದ್ದು, ವಿಮಾನಗಳು ತಾಲೀಮು ನಡೆಸುತ್ತಿವೆ. ಈ ವೇಳೆ ಯಲಹಂಕ ವಾಯು ನೆಲೆಯಲ್ಲಿ ಸೂರ್ಯ ಕಿರಣ ಎರಡು ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡಿವೆ.

ರಿಹರ್ಸಲ್ ನಡೆಸುತ್ತಿದ್ದ ವೇಳೆ 2 ಸೂರ್ಯ ಕಿರಣ್ ಜೆಟ್ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಡಿಕ್ಕಿ ಬಳಿಕ ಎರಡೂ ಲಘು ಯುದ್ಧ ವಿಮಾನಗಳು ಹೊತ್ತಿ ಉರಿದಿವೆ. ಇಬ್ಬರು ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದರೆ, ಓರ್ವ ಪೈಲಟ್ ಸಾವನ್ನಪ್ಪಿದ್ದಾರೆ.

ವಿಮಾನಗಳು ಡಿಕ್ಕಿಹೊಡೆಯುತ್ತಿದ್ದಂತೆಯೇ ಮೂವರು ಪೈಲಟ್ ಗಳು ಪ್ಯಾರಾಚೂಟ್ ನಿಂದ ಹಾರಿ ಕೆಳಕ್ಕೆ ಇಳಿದಿದ್ದಾರೆ. ಈ ವೇಳೆ ಓರ್ವ ಸಾವನ್ನಪ್ಪಿದ್ದಾರೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

2-IAF Air Crafts crash at yelahanka

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ