![Crime+Scene+Tape+and+Police+Lights+MGN](http://kannada.vartamitra.com/wp-content/uploads/2018/03/CrimeSceneTapeandPoliceLightsMGN-677x381.jpg)
ಚಿತ್ರದುರ್ಗ, ಫೆ.18- ವಿಮೆ ಹಣ ಪಡೆಯುವುದಕ್ಕಾಗಿ ಗಂಡನನ್ನು ಕೊಲೆ ಮಾಡಿಸಿದ್ದ ಪತ್ನಿ ಸೇರಿಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಸೆ.15ರಂದು ರಾಜಣ್ಣ ಚಿತ್ರದುರ್ಗ ಹೆದ್ದಾರಿ-4ರ ಸಿಬಾರಾ ಸಮೀಪ ಅಪಘಾತದಲ್ಲಿ ಮೃತ ಪಟ್ಟಿದ್ದಾರೆಂದು ಪ್ರಕರಣ ದಾಖಲಾಗಿತ್ತು.
ಆದರೆ, ಮೃತ ರಾಜಣ್ಣನ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕೊಲೆಯಾಗಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ರಾಜಣ್ಣನ ಪತ್ನಿ ಕಮಲಮ್ಮಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಹಣಕ್ಕಾಗಿ ಸಹಚರರಾದ ನಾಗರಾಜ, ಪ್ರದೀಪ, ಗಿರೀಶ, ಕೋಟೇಶ್, ಕಿರಣ್ ಎಂಬುವವರ ಜತೆಗೂಡಿ ಗಂಡನನ್ನು ಕೊಲೆ ಮಾಡಿಸಿರುವುದಾಗಿ ತಪ್ಪೋಪ್ಪಿಕೊಂಡಿದ್ದಾರೆ.
ಅಪಘಾತದ ಮೂಲಕ ಗಂಡನನ್ನು ಸಾಯಿಸಿ ವಿಮೆ ಹಣ ಪಡೆಯಲು ಹೊಂಚುಹಾಕಿದ್ದ ಪತ್ನಿ ಕಮಲಮ್ಮ ಈಗ ಕಂಬಿ ಹಿಂದೆ ಇದ್ದಾಳೆ.