ವ್ಯಕ್ತಿಯೊಬ್ಬರಿಗೆ ಕ್ಯಾಂಟರ್ ವಾಹನ ಡಿಕ್ಕಿ ವ್ಯಕ್ತಿಯ ಸಾವು

ನಾಗಮಂಗಲ, ಫೆ.18-ಅತಿವೇಗವಾಗಿ ಮುನ್ನುಗ್ಗಿದ ಕ್ಯಾಂಟರ್ ವಾಹನ ವೃದ್ಧರೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿರುವ ಘಟನೆ ಪಟ್ಟಣ ಪೊಲೀಸ್‍ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಉಪ್ಪಾರಹಳ್ಳಿಯ ನಿವಾಸಿ ಮುದ್ದಪ್ಪ (70) ಮೃತಪಟ್ಟ ವೃದ್ಧ.

ಮಂಡ್ಯಜಿಲ್ಲೆ ನಾಗಮಂಗಲ ತಾಲೂಕಿನ ಉಪ್ಪಾರಹಳ್ಳಿ ಗೇಟ್ ಬಳಿ ಮುದ್ದಪ್ಪ ನಡೆದು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಚಾಲಕ ವಾಹನ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಪರಿಣಾಮವಾಗಿ ಮುದ್ದಪ್ಪ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಅಪಘಾತ ವೆಸಗಿ ಪರಾರಿಯಾಗಿರುವ ಚಾಲಕನಿಗಾಗಿ ಶೋಧ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ