ಸ್ನೇಹಿತರಿಂದ ಯುವಕನ ಬರ್ಬರ ಕೊಲೆ

ಆನೇಕಲ್, ಫೆ.18-ಸ್ನೇಹಿತರ ಜೊತೆಗೂಡಿ ಪಾರ್ಟಿ ಮಾಡಲು ಬಂದಿದ್ದ ಯುವಕ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೊಲೆಯಾದ ಯುವಕನ ಹೆಸರು, ವಿಳಾಸ ತಿಳಿದುಬಂದಿಲ್ಲ.

ಸುಮಾರು 30 ವರ್ಷದ ವರಂತೆ ಕಾಣುವ ಈ ಯುವಕ ಕಳೆದ ರಾತ್ರಿ ಹೊಂಡಾ ಡಿಯೋ ಬೈಕ್‍ನಲ್ಲಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಆನೇಕಲ್ ವ್ಯಾಪ್ತಿಯ ಮುತ್ತಗಟ್ಟಿ ಗ್ರಾಮದರಸ್ತೆ ಬಳಿ ಬಂದಿದ್ದನು.

ರಾತ್ರಿ ಸ್ನೇಹಿತರೆಲ್ಲ ಪಾರ್ಟಿ ಮಾಡಿದ್ದಾರೆ. ಈ ವೇಳೆ ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳವಾಗಿದೆ.ವಿಕೋಪಕ್ಕೆ ತಿರುಗಿದಾಗ ಯುವಕನತಲೆ ಮೇಲೆ ಕಲ್ಲುಎತ್ತಿಹ ಹಾಕಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಇಂದು ಮುಂಜಾನೆರಸ್ತೆ ಬದಿ ಯುವಕನ ಕೊಲೆಯಾಗಿರುವುದನ್ನು ಗಮನಿಸಿದ ದಾರಿ ಹೋಕರು ತಕ್ಷಣ ಪೊಲೀಸರಿಗೆ ತಿಳಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಕೊಲೆಯಾದ ಯುವಕನ ವಾರಸುದಾರರಿಗಾಗಿ ಶೋಧ ಕೈಗೊಂಡಿದ್ದಾರೆ.

ಈ ಸ್ಥಳದಲ್ಲಿ ಬಂದು ಪಾರ್ಟಿ ಮಾಡಿದ ನಂತರ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.ಕೊಲೆ ಮಾಡಿ ಪರಾರಿ ಯಾಗಿರುವ ಆರೋಪಿಗಳಿಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ