ವಾಷಿಂಗ್ಟನ್,ಫೆ.16- ಮೆಕ್ಸಿಕೋ ಗಡಿ ಉದ್ದಕ್ಕೂ ತಡೆಗೋಡೆ ನಿರ್ಮಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಮೆಕ್ಸಿಕೋ ಕಡೆಯಿಂದ ಮಾದಕವಸ್ತುಗಳು, ದುಷ್ಕರ್ಮಿಗಳು, ಮಾನವ ಕಳ್ಳಸಾಗಣೆದಾರರು ಮತ್ತು ಅಪಾರ ಸಂಖ್ಯೆಯಲ್ಲಿ ಅಕ್ರಮವಾಗಿ ಅಮೆರಿಕಕ್ಕೆ ವಲಸೆ ಬರುವವರನ್ನು ತಡೆಯಲು ಗಡಿ ಗೋಡೆ ನಿರ್ಮಾಣ ಅನಿವಾರ್ಯವಾಗಿದೆ. ಆದ್ದರಿಂದ ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಿಸಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸುವುದು ಅಧ್ಯಕ್ಷೀಯ ಅಧಿಕಾರದ ದುರ್ಬಳಕೆಯಾಗುತ್ತದೆ ಎಂದು ಅಮೆರಿಕ ಸಂಸತ್ನ ಸಭಾಧ್ಯಕ್ಷ ನ್ಯಾನ್ಸಿ ಪೆಲೋಸಿ ಅಧ್ಯಕ್ಷ ಟ್ರಂಪ್ ಅವರನ್ನು ಈ ಹಿಂದೆಯೇ ಎಚ್ಚರಿಸಿದ್ದರು.
ಆದರೆ ಟ್ರಂಪ್ ಇದ್ಯಾವುದನ್ನು ಲೆಕ್ಕಿಸದೆ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, ದೇಶದ ಹಿತದೃಷ್ಟಿಯಿಂದ ಇಂತಹ ಕ್ರಮ ಅನಿವಾರ್ಯ ಎಂದು ಟ್ರಂಪ್ ತಿಳಿಸಿದ್ದಾರೆ.