ಬೆಂಗಳೂರು, ಫೆ.14-ಅಪಘಾತ ಮತ್ತು ಅಪರಾಧ ರಹಿತವಾಗಿ ಕರ್ತವ್ಯ ನಿರ್ವಹಿಸಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 38 ಚಾಲನಾ ಸಿಬ್ಬಂದಿ (ಚಾಲಕ ಕಂ ನಿರ್ವಾಹಕ)ಗೆ ಬೆಳ್ಳಿ ಪದಕ ಪ್ರದಾನ ಮಾಡಲಾಯಿತು.
ಕೇಂದ್ರೀಯ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶಿವಯೋಗಿ ಸಿ.ಕಳಸದ್ ಅವರು 2016-17ನೆ ಸಾಲಿನ ಎಂಟು ನಿರ್ವಾಹಕರು, ನಾಲ್ವರು ಚಾಲಕರು ಹಾಗೂ 2017-18ನೆ ಸಾಲಿನ 23 ನಿರ್ವಾಹಕರು ಮತ್ತು ಮೂವರು ಚಾಲಕ ಕಂ ನಿರ್ವಾಹಕರಿಗೆ ಬೆಳ್ಳಿ ಪದಕ ಪ್ರದಾನ ಮಾಡಿದರು.
2016-17ನೆ ಸಾಲಿನಲ್ಲಿ ಬೆಂಗಳೂರು ಘಟಕವೊಂದರ ನಿರ್ವಾಹಕ ಮಾರ್ಕಂಡೇಯ, ಚಾಲಕ ಕಂ ನಿರ್ವಾಹಕ ಬಸವರಾಜ್, ಡಿ.ವಸಂತ್ಕುಮಾರ್, ಘಟಕ-2ರ ಮೌಲಾಲಿ ಮುಲ್ಲಾ , ಘಟಕ-4ರ ನಿರ್ವಾಹಕ ಆರ್.ನಾಗರಾಜ್, ಕೆಜಿಎಫ್ ಘಟಕದ ನಿರ್ವಾಹಕ ರಾಜ್ಕುಮಾರ್ ನಾಯಕ್, ಮಂಡ್ಯದ ನಿರ್ವಾಹಕ ವೆಂಕಟರಾಮ್, ನವಾಬ್ಖಾನ್, ಎನ್.ಎಸ್.ರವಿಕುಮಾರ್, ಚಿಕ್ಕಬಳ್ಳಾಪುರದ ಶಾಂತರಾಮ್, ಉಡುಪಿ ಘಟಕದ ಸುಧಾಕರ್ಶೆಟ್ಟಿ, ಶ್ರೀಧರ ಪೂಜಾರಿ ಇವರುಗಳಿಗೆ ಬೆಳ್ಳಿ ಪದಕ ನೀಡಲಾಯಿತು.
2017-18ನೆ ಸಾಲಿನಲ್ಲಿ ಕೋಲಾರದ ಆದಿಲಕ್ಷ್ಮಿನಾರಾಯಣ (ಮರಣೋತ್ತರ), ಈರಪ್ಪ, ಕುಣಿಗಲ್ನ ಗೋಪಾಲಕೃಷ್ಣ, ಬಾಗೇಪಲ್ಲಿಯ ಗೋಪಾಲ, ಮಳವಳ್ಳಿಯ ಮಂಜುಳಾ, ಮದ್ದೂರಿನ ಕೃಷ್ಣ, ಎಸ್.ಡಿ.ಬೋರೇಗೌಡ, ಉಡುಪಿಯ ಮೆನನ್ ಪಿಂಟೋ, ರಾಜು ಕೋಟೆನ್ನವರ್, ಕೊಳ್ಳೇಗಾಲದ ಎಂ.ರಾಜು, ಕುಂದಾಪುರದ ರಾಮ್ ಜೆ.ಮೊಗೇರ, ರಿಚರ್ಡ್ ಪಿಂಟೋ, ವೆಂಕಟರಮಣ ನಾಯಕ, ಭಾಸ್ಕರ್ಶೆಟ್ಟಿ, ತರುಣ್ಕುಮಾರ್, ರಾಮನಾಥ, ಜಯಶೀಲಶೆಟ್ಟಿ, ಕೃಷ್ಣ ದೇವಾಡಿಗ, ನಾಗಪ್ಪ, ಮಕ್ಬುಲ್ ಪಟೇಲ್, ಶಂಕರ್ಶೆಟ್ಟಿ, ಷಣ್ಮುಗ ಅಜೂರ್, ಗಿರಿಧರ್, ಸಮೀವುಲ್ಲಾ ಹಾಗೂ ಮಂಗಳೂರು ಘಟಕವೊಂದರ ಬಿ.ರಂಗನಾಥ್ ಬೆಳ್ಳಿ ಪದಕ ಪಡೆದರು.
ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ನಿರ್ವಾಹಕರಿಗೂ ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನಿಗಮದ ಸಿಬ್ಬಂದಿ ಮತ್ತು ಆಡಳಿತ ವಿಭಾಗದ ನಿರ್ದೇಶಕ ಪಿ.ಆರ್.ಶಿವಪ್ರಸಾದ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.