ಕಿವಿ ಕೇಳದ ಮತ್ತು ಮಾತು ಬಾರದವರಿಗೆ ಸಂವಹನ ನಡೆಸಲು ನೆರವಾಗುವ ಸಾಧನ: ದ್ವತೀಯ ಪಿಯುಸಿ ವಿದ್ಯಾರ್ಥಿಯಿಂದ ಅಭಿವೃದ್ಧಿ

ಬೆಂಗಳೂರು, ಫೆ.14-ದೃಷ್ಟಿಹೀನರು, ಕಿವಿ ಕೇಳದವರು ಹಾಗೂ ಮಾತು ಬಾರದವರಿಗೆ ಸಂವಹನ ನಡೆಸಲು ನೆರವಾಗುವ ಸಾಧನವೊಂದನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬರು ಅಭಿವೃದ್ಧಿಪಡಿಸಿದ್ದಾರೆ.

ಇದೇ ಮೊದಲ ಬಾರಿಗೆ ಕುರುಡು, ಕಿವುಡ ಹಾಗೂ ಮೂಕರು ಮೂವರಿಗೂ ಅನುಕೂಲವಾಗುವ ಸಾಧನ ಇದಾಗಿದೆ.

ಬಿಡಿಡಿ- (ಬ್ಲೈಂಡ್-ಡೆಫ್-ಡೆಮ್) ದೃಷ್ಟಿಹೀನ, ಕಿವಿ ಕೇಳದ ಮತ್ತು ಮಾತು ಬಾರದ ವ್ಯಕ್ತಿಗಳಿಗಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ರೋಚನ್ ಎಚ್.ಎಂ ಎಂಬುವವರು ಅಭಿವೃದ್ಧಿಪಡಿಸಿರುವ ಸಾಧನವನ್ನು ಬೆಂಗಳೂರು ಪ್ಲೆಸ್‍ಕ್ಲಬ್‍ನಲ್ಲಿ ಪರಿಚಯಿಸಿದರು.

ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್, ಎಎಂಸಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ರೋಚನ್ ಎಚ್.ಎಂ.ತಾವು ಅಭಿವೃದ್ಧಿಪಡಿಸಿರುವ ಬಿಡಿಡಿ ಅಸಿಸ್ಟ್ ಸಾಧನಕ್ಕೆ ಪೇಟೆಂಟ್‍ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ದೃಷ್ಟಿ ಹೀನ, ಕಿವಿ ಕೇಳದ, ಮಾತು ಬಾರದ ವ್ಯಕ್ತಿಗಳು ಇತರ ವಿಕಲಚೇತನರೊಂದಿಗೆ ಹಾಗೂ ಸಾಮಾನ್ಯ ಜನರೊಂದಿಗೆ ಸಂವಹನ ನಡೆಸುವಾಗ ಸಮಸ್ಯೆಗಳು ಎದುರಾಗುತ್ತವೆ. ಇವರುಗಳು ಬಳಸುವ ಬ್ರೈಲ್ ಲಿಪಿ ಮತ್ತು ಸೈನ್ ಲಾಂಗ್ವೇಜ್‍ಗಳು ಸಾಮಾನ್ಯ ಜನರಿಗೆ ಆರ್ಥವಾಗುವುದಿಲ್ಲ. ಕಡಿಮೆ ವೆಚ್ಚದ ಸಾಧನವಾಗಿರುವ ಬಿಡಿಡಿ ಅಸಿಸ್ಟ್ ಈ ಸಂವಹನದ ಅಂತರವನ್ನು ಕಡಿಮೆಗೊಳಿಸುತ್ತದೆ. ತಜ್ಞ ಭಾಷಾಂತರಕಾರರ ಅವಲಂಬನೆಯನ್ನು ತಗ್ಗಿಸಿ ಮಧ್ಯವರ್ತಿಯಂತೆ ಕಾರ್ಯನಿರ್ವಹಿಸುತ್ತದೆ ಎಂದು ಈ ವೇಳೆ ರೋಚನ್ ತಿಳಿಸಿದರು.

ಬಿಡಿಡಿ ಅಸಿಸ್ಟ್ ಸಾಧನದಲ್ಲಿ ಟೈಪಿಂಗ್, ರೈಟಿಂಗ್, ಸ್ಪೀಚ್ ರೆಕಗ್ನೇಷನ್, ಬ್ರೈಲ್ ಕೀ ಬೋರ್ಡ್ ಮತ್ತು ಸೈನ್ ಲಾಂಗ್ವೇಜ್‍ಅನ್ನು ಇನ್‍ಪುಟ್‍ಗಳಾಗಿ ಸೇರಿಸಲಾಗಿದೆ. ಔಟ್‍ಪುಟ್ ವಿಧಾನಗಳಲ್ಲಿ ಬ್ರೈಲ್, ಸೈನ್ ಲಾಂಗ್ವೇಜ್ ಹಾಗೂ ಟೆಕ್ಸ್ಟ್ ಮತ್ತು ಸ್ಪೀಚ್‍ಗಳು ಸೇರಿವೆ.

ಯುನಿಫೈಡ್ ಇಂಗ್ಲಿಷ್ ಬ್ರೈಲ್ ಸ್ಟಾ ್ಯಂಡರ್ಡ್ ಪ್ರಕಾರ ಬ್ರೈಲ್ ಔಟ್‍ಪುಟ್ ನೀಡಿದರೆ ಅಮೆರಿಕನ್ ಸೈನ್ ಲಾಂಗ್ವೇಜ್ ಸ್ಟ್ಯಾಂಡರ್ಡ್ ಪ್ರಕಾರ, ಸೈನ್ ಔಟ್‍ಪುಟ್ ನೀಡಲಾಗುತ್ತದೆ.ಸ್ಪೀಚ್ ಔಟ್‍ಪುಟ್ ಮತ್ತು ಟೆಕ್ಸ್ಟ್‍ಅನ್ನು ಇಂಗ್ಲಿಷ್‍ನಿಂದ ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ತಮಿಳು, ತೆಲುಗು, ಉರ್ದು ಮತ್ತು ಇತರ ಭಾಷೆಗಳಿಗೆ ಅನುವಾದಿಸಬಹುದು.

ಅಲ್ಲದೆ, ಬಿಡಿಡಿ ಅಸಿಸ್ಟ್ ಇನ್ನೊಂದು ವಚ್ರ್ಯುವಲ್ ಅಸಿಸ್ಟೆಂಟ್ ಮೋಡ್‍ನೊಂದಿಗೆ ಲಭ್ಯವಿದ್ದು, ಇದು ಅಂಗವಿಕಲ ವ್ಯಕ್ತಿಗಳ ಜೀವನವನ್ನು ಸುಲಭಗೊಳಿಸುತ್ತದೆ ಎಂದು ಹೇಳಿದರು.

ಈ ಔಟ್‍ಪುಟ್ ವಿಧಾನಗಳ ಮೂಲಕ ಡಿಜಿಟಲ್ ಡಾಕ್ಯುಮೆಂಟ್‍ಅನ್ನು ಇದು ಪ್ರದರ್ಶಿಸುತ್ತದೆ.ಅಲ್ಲದೆ, ಇದು ಬೋಧನಾ ವಿಧಾನವನ್ನು ಒಳಗೊಂಡಿದೆ.ಬ್ರೈಲ್ ಮತ್ತು ಸೈನ್ ಲಾಂಗ್ವೇಜ್ ಪರಿಚಯವಿಲ್ಲದ ಜನರಿಗೂ ಇದನ್ನು ಬೋಧಿಸುತ್ತದೆ.

ಈವರೆಗೆ ಕುರುಡು, ಕಿವುಡು, ಮೂಕ ಈ ಮೂರೂ ವರ್ಗದವರಿಗೂ ಅನ್ವಯವಾಗುವ ಏಕಸಾಧನ ಅಭಿವೃದ್ಧಿಯಾಗಿರಲಿಲ್ಲ. ಕಡಿಮೆ ವೆಚ್ಚದ ಬಿಡಿಡಿ ಅಸಿಸ್ಟ್ ಸಾಧನ ಇವರೆಲ್ಲರಿಗೂ ನೆರವಾಗಲಿದೆ. ಸುಮಾರು ಆರು ಸಾವಿರ ರೂಪಾಯಿಗಳಲ್ಲಿ ಯಾವುದೇ ಸ್ಮಾರ್ಟ್ಫೋನ್, ಟ್ಯಾಬ್‍ಲೆಟ್ ಅಥವಾ ಕಂಪ್ಯೂಟರ್‍ಗೆ ಈ ಸಾಧನವನ್ನು ಸುಲಭವಾಗಿ ಹೊಂದಿಸಬಹುದು.

ಒಂದು ಅಥವಾ ಹೆಚ್ಚಿನ ವ್ಯಕ್ತಿಗಳು ಅಂಗವೈಕಲ್ಯ ಹೊಂದಿರುವ ಕುಟುಂಬಗಳಿಗೆ ಈ ಸಾಧನ ಸೂಕ್ತವಾಗಿದೆ.ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಬ್ರೈಲ್ ಡಿಸ್‍ಪ್ಲೇಗಳ ಮೌಲ್ಯ 1,00,000ರಷ್ಟಿದೆ. ದೃಷ್ಟಿಹೀನರಿಗೆ ಅಡಚಣೆ ಪತ್ತೆಹಚ್ಚುವ ಸ್ಮಾರ್ಟ್‍ಕೇನ್ ಅಭಿವೃದ್ಧಿಪಡಿಸಲು ಪೆÇ್ರ.ಡಾ.ವೆಂಕಟೇಶ್ ಅವರೊಂದಿಗೆ ಕೆಲಸ ಮಾಡಿದ್ದಾಗಿ ರೋಚನ್ ತಿಳಿಸಿದ್ದಾರೆ.

ಡಾ.ಮಧುಸೂದನ ಎಚ್.ಎಸ್. ಮತ್ತು ಚಂದ್ರಿಕ ಎಚ್.ಜಿ. ಅವರ ಪುತ್ರ ರೋಚನ್  ಮತ್ತು ರೋಬೋಟಿಕ್ಸ್‍ಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ಹಲವಾರು ಅಪ್ಲಿಕೇಷನ್ ಹಾಗೂ ವೆಬ್‍ಸೈಟ್‍ಗಳನ್ನು ಕೂಡ ನಿರ್ಮಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ