ಟೀಂ ಇಂಡಿಯಾದ ಡ್ಯಾಶಿಂಗ್ ಓಪನರ್ ರೋಹಿತ್ ಶರ್ಮಾ ಅವರ ಮುದ್ದಿನ ಮಗಳು ಈಗ ಮತ್ತೆ ಸುದ್ದಿಯಲಿದ್ದಾಳೆ. ಸರಣಿ ಸೋತು ಬಂದ ರೋಹಿತ್ ಇದೀಗ ಮಗಳನ್ನ ನೋಡಿ ಫುಲ್ ರಿಲ್ಯಾಕ್ಸ್ ಆಗಿದ್ದಾರೆ.
ಅಪ್ಪನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದ ಮುಂಬೈಕರ್
ಕಳೆದ ತಿಂಗಳು ಹೊಸ ವರ್ಷ ಆರಂಭಕ್ಕೂ ಮುನ್ನ ಹಿಟ್ಮ್ಯಾನ್ ರೋಹಿತ್ ಶರ್ಮಾ ಅಪ್ಪನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ರು. ಪತ್ನಿ ರಿತಿಕಾ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ರೋಹಿತ್ ಆ ಸಂದರ್ಭದಲ್ಲಿ ಆಸಿಸ್ ಪ್ರವಾಸದಲ್ಲಿದ್ರು. ಆಸಸ್ ಪ್ರವಾಸವನ್ನ ಅರ್ಧಕ್ಕೆ ಮೊಟಕುಗೊಳಿಸಿ ತವರಿಗೆ ಹಿಂತಿರುಗಿದ್ರು. ತಮ್ಮ ಮುದ್ದಿನ ಮಗುವನ್ನ ನೋಡಲು ಭಾರತಕ್ಕೆ ಬಂದ ರೋಹಿತ್ ಸಂಭ್ರಮಕ್ಕೆ ಪಾರವೇ ಇರಲಿಲ್ಲ.
ರೋಹಿತ್ ತಮಗೆ ಹುಟ್ಟಿದ ಮುದ್ದಿನ ಮಗಳ ಅಮ್ಮನ ಕೈಹಿಡಿದ ಫೋಟೋವೊಂದನ್ನ ಪೋಸ್ಟ್ ಮಾಡಿದ್ರು. ಈ ಪೋಸ್ಟ್ ಗೆ 1.5ಞ ಕಮೆಂಟ್ಸ್ ಮತ್ತು 37 ಏ ಐiಞes ಬಂದಿತ್ತು. ಇದೇ ಖುಷಿಯಲ್ಲಿ ರೋಹಿತ್ ಕಿವೀಸ್ ವಿರುದ್ಧ ಸರಣಿ ಆಡಲು ಮತ್ತೆ ಬ್ಲೂ ಕ್ಯಾಂಪ್ ಸೇರಿದ್ರು.
ಸರಣಿ ಸೋತು ಬೇಸರದಲ್ಲಿ ತವರಿಗೆ ಮರಳಿದ ರೋಹಿತ್
ಟೀಂ ಇಂಡಿಯಾದ ರೋಹಿತ್ ಶರ್ಮಾ ಮೊನ್ನೆ ಕಿವೀಸ್ ವಿರುದ್ಧ ಟಿ20 ಸರಣಿಯನ್ನ ಕೈಚೆಲ್ಲಿ ಭಾರತಕ್ಕೆ ಮರಳಿದ್ದಾರೆ. ಕೇವಲ ನಾಲ್ಕು ರನ್ಗಳಿಂದ ವಿರೋಚಿತ ಸೋಲು ಅನುಭವಿಸಿದ ರೋಹಿತ್ ಮೊದಲ ಬಾರಿ ಸರಣಿ ಕೈಚೆಲ್ಲಿಕೊಂಡು ಬೇಸರದಲ್ಲಿದ್ರು.
ಸೋತ ಅಪ್ಪನಿಗೆ ಸ್ಮೈಲ್ ಕೊಟ್ಟು ಸ್ವಾಗತಸಿದ ಸಮೈರಾ ..!
ಕಿವೀಸ್ ವಿರುದ್ಧ ಸರಣಿ ಸೋತು ಬರಿಗೈಯಲ್ಲಿ ವಾಪಸ್ ಮರಳಿದ ಅಪ್ಪ ರೋಹಿತ್ಗೆ ಮುದ್ದಿನ ಮಗಳು ಸಮೈರಾ ಸ್ಮೈಲ್ ಕೊಟ್ಟು ವೆಲ್ಕಮ್ ಮಾಡಿದ್ದಾಳೆ. ರೋಹಿತ್ ಪತ್ನಿ ರಿತಿಕಾ Iಟಿsಣಚಿgಡಿಚಿmನಲ್ಲಿ ಸಮೈರಾ ಮುದ್ದಾಗಿ ನಗುತ್ತಿರುವ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದಾರೆ. ಮಗಳ ನಗುವನ್ನ ನೋಡಿರುವ ರೋಹಿತ್ ಫುಲ್ ಫಿದಾ ಆಗಿದ್ದಾರೆ. ಜೊತೆಗೆ ಸರಣಿ ಸೋಲಿನ ಕಹಿಯನ್ನ ಮರೆತಿದ್ದಾರೆ.
ಅಪ್ಪನಾಗಿ ಕರ್ತವ್ಯಕ್ಕೆ ಮರಳಿದ ಹಿಟ್ಮ್ಯಾನ್ ರೋಹಿತ್..!
ಕಳೆದ ಒಂದು ತಿಂಗಳಿನಿಂದ ರಾಷ್ಟ್ರೀಯ ಕರ್ತವ್ಯ ನಿಭಾಯಿಸಲು ಕಿವೀಸ್ ನಾಡಿಗೆ ತೆರೆಳಿದ್ದ ರೋಹಿತ್ ಈಗ ಸರಣಿ ಮುಗಿಸಿ ವಾಪಸ್ ತವರಿಗೆ ಮರಳಿದ್ದಾರೆ. ತವರಿಗೆ ಮರಳಿರುವ ರೋಹತ್ ಈಗ ಅಪ್ಪನಾಗಿ ಕರ್ತವ್ಯಕ್ಕೆ ಮರಳಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ನಡೆಯಲಿರುವ ಏಕದಿನ ಸರಣಿ ಆಡೋದು ಕೂಡು ಅನುಮಾನದಿಂದ ಕೂಡಿದೆ. ಹೀಗಾಗಿ ತಮ್ಮ ಮುದ್ದಿನ ಮಗಳ ಜೊತೆ ಇನ್ನಷ್ಟು ದಿನ ಸಂತೋಷದಿಂದ ಕಾಲ ಕಳೆದಬಹುದಾಗಿದೆ.