ಸುರೇಶ್ ರೈನಾ ಬಗ್ಗೆ ಹರಿದಾಡುತ್ತಿದೆ ಸುಳ್ಳು ಸುದ್ದಿ : ಎಚ್ಚರಿಕೆ ಕೊಟ್ಟ ಪವರ್ ಹಿಟ್ಟರ್

ಟೀಂ ಇಂಡಿಯಾದ ಪವರ್ ಹಿಟ್ಟರ್ ಸುರೇಶ್ ರೈನಾ ಮತ್ತೋಮ್ಮೆ ಸುದ್ದಿಯಲ್ಲಿದ್ದಾರೆ. ಈ ಎಡಗೈ ಬ್ಯಾಟ್ಸ್ಮನ್ ಸುದ್ದಿಯಾಗಿರೋದು ತಮ್ಮ ಆಟದಿಂದ ಅಲ್ಲ ಸುಳ್ಳು ಸುದ್ದಿಯಿಂದಾಗಿ…

ಸದ್ಯ ಈ ಬ್ಯಾಟ್ಸ್ಮನ್ ಟೀಂ ಇಂಡಿಯಾದಲ್ಲಿ ಆಡುತ್ತಿಲ್ಲ. ವರ್ಷಗಳ ಹಿಂದೆ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿದ್ದ ಸುರೇಶ್ ರೈನಾ ಇಂದು ಅವಕಾಶಕ್ಕಾಗಿ ಟೀಂ ಇಂಡಿಯಾದ ಬಾಹಗಿಲು ಬಡಿಯುತ್ತಿದ್ದಾರೆ.

ಈ ಪವರ್ ಹಿಟ್ಟರ್ ಮತ್ತೆ ಬ್ಲೂ ರ್ಜೆಸಿಯಲ್ಲಿ ಆಡೋದಕ್ಕೆ ಪಟ್ಟ ಶ್ರಮ ಒಂದಾ ಎರಡಾ ? ವರ್ಷದ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೂ ಮುನ್ನ ಈ ಯುಪಿ ಬ್ಯಾಟ್ಸ್ಮನ್ ವಿಶೇಷ ತರಬೇತಿ ಪಡೆದು ತಂಡಕ್ಕೆ ಕಮ್ಬ್ಯಾಕ್ ಮಾಡಿದ್ರು. ಹೇಳಿಕೊಳ್ಳುವಂತಹ ಪರ್ಫಾಮನ್ಸ್ ಕೊಡದಿದ್ರು. ಐತಿಹಾಸಿಕ ಟಿ20 ಗೆಲ್ಲುವಲ್ಲಿ ನೀರ್ಣಾಯಕ ಪಾತ್ರ ವಹಸಿದ್ರು.

ಕೊನೆಯ ಬಾರಿಗೆ ಆಂಗ್ಲರ ವಿರುದ್ಧ ಟಿ20 ಸರಣಿ ಆಡಿದ್ದ ರೈನಾ
ಕಳೆದ ವರ್ಷ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಆಂಗ್ಲರ ವಿರುದ್ಧದ ಸರಣಿಗೂ ಮುನ್ನ ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ಧ ಟಿ20 ಸಣಿ ಆಡಿತ್ತು. ಐರ್ಲೆಂಡ್ ವಿರುದ್ಧ ಎರಡನೇ ಪಂದ್ಯದಲ್ಲಿ ರೈನಾ 69 ರನ್ ಬಾರಿಸಿ ಮಿಂಚಿದ್ರು. ಆದ್ರೆ ನಂತರ ನಡೆದ ಆಂಗ್ಲರ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಸುರೇಶ್ ರೈನಾ ಫ್ಲಾಪ್ ಆದ್ರು. ಇದರ ಪರಿಣಾಮವೇ ಈ ಹಾರ್ಡ್ ಹಿಟ್ಟರ್ ತಂಡದಿಂದ ಗೇಟ್ ಪಾಸ್ ಪಡೆಯಬೇಕಾಯಿತು.

ಮುಗೀತಾ ಸುರೇಶ್ ರೈನಾ ಆಟ ?
ಮತ್ತೆ ಃಚಿಜ ಫಾರ್ಮ್ನಲ್ಲಿ ಸಿಲುಕಿದ ಸುರೇಶ್ ರೈನಾ ಮುಂಬರುವ ವಿಶ್ವಕಪ್ ಆಡಬೇಕೆಂಬ ಮಹಾದಾಸೆ ಹೊಂದಿದ್ದರು. ಆದರೆ ದೇಸಿ ಟೂರ್ನಿಯಲ್ಲೂ ಫ್ಲಾಪ್ ಆಗಿದ್ರು. ಇದರ ಜೊತೆಗೆ ಕೆಲವು ಪಂದ್ಯಗಳನ್ನ ಆಡದೇ ತಮ್ಮ ಸ್ಥಾನ ಬೇರೆಯವರ ಪಾಲಾಯಿತು. ಇತ್ತಿಚೆಗೆ ಮುಕ್ತಾಯವಾದ ರಣಜಿ ಟೂರ್ನಿಯಲ್ಲಿ ರೈನಾ ಐದು ಪಂದ್ಯಗಳಿಂದ ಗಳಿಸಿದ್ದು ಕೇವಲ 243 ರನ್. ರೈನಾ ಫ್ಲಾಪ್ ಪರ್ಫಾಮನ್ಸ್ ಕಂಡ ಅಭಿಮಾನಿಗಳು ರೈನಾ ಕ್ರಿಕೆಟ್ ಬದುಕು ಮುಗಿಯಿತು ಎಂದೇ ಎಲ್ಲರೂ ಮಾತನಾಡಿಕೊಳ್ಳುತ್ತಿದ್ರು.

ಹೀಗಿರುವಾಗ ಕೆಲವು ವಾರಗಳಿಂದ ಯೂ ಟ್ಯೂಬ್ , ಸೋಶಿಯಲ್ ಮೀಡಿಯಾದಲ್ಲಿ ಸುರೇಶ್ ರೈನಾ ಕಾರು ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಸಾವನಪ್ಪಿದ್ದಾರೆ ಎಂಬೆಲ್ಲ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದವೆ. ರೈನಾ ಫೋಟೋ ಜೊತೆಗೆ ಕೆಲವು ಕ್ರಿಕೆಟಿಗರ ಫೋಟೋಗಳನ್ನ ಬಳಸಿ ಸುಳ್ಳು ಸುದ್ದಿಗಳನ್ನ ಹರಿಬಿಡಲಾಗುತ್ತಿದೆ.

ಸುಳ್ಳು ಸುದ್ದಿ ನಿರಾಕರಿಸಿದ ಪವರ್ ಹಿಟ್ಟರ್
ಹೀಗೆ ಸುಳ್ಳು ಹರಿದಾಡುತ್ತಿರೋದು ಸ್ವತಃ ಸುರೇಶ್ ರೈನಾ ಗಮನಕ್ಕೂ ಬಂದಿದ್ದು ಸುದ್ದಿಯನ್ನ ನೋಡಿ ಬೇಸರಗೊಂಡಿದ್ದಾರೆ. ಈ ಬಗ್ಗೆ ಸ್ವತಃ ರೈನಾ ಟ್ವಿಟರ್ ಮೂಲಕ ಮನವಿಯೊಂದನ್ನ ಮಾಡಿದ್ದಾರೆ.

ಸುಳ್ಳು ಸುದ್ದಿ ನಿರಾಕರಿಸಿ
ಕಾರು ಅಪಘಾತದಲ್ಲಿ ನಾನು ಗಾಯಗೊಂಡಿದ್ದೇನೆ ಎಂಬ ಸುಳ್ಳು ಸುದ್ದಿ ಕಳೆದ ಕೆಲವು ವಾರಗಳಿಂದ ಹರಿದಾಡುತ್ತಿದೆ. ಇದರಿಂದ ನನ್ನ ಕುಟುಂಬ ಮತ್ತು ಸ್ನೇಹಿತರು ಡಿಸ್ಟರ್ಬ್ ಆಗಿದ್ದೇವೆ. ಇಂಥ ಸುದ್ದಿಗಳನ್ನ ದಯವಿಟ್ಟು ನಿರಾಕರಿಸಿ. ದೇವರ ದಯೆಯಿಂದ ನಾನು ಚೆನ್ನಾಗಿದ್ದೇನೆ. ಕೆಲವು ಯೂ ಟ್ಯೂಬ್ ಚಾನಲ್ಗಳು ಈ ಬಗ್ಗೆ ವರದಿ ಮಾಡಿವೆ. ಇದರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುತ್ತೇನೆ. ಸುರೇಶ್ ರೈನಾ ಮನವಿಯೊಂದನ್ನ ಮಾಡಿದ್ದಾರೆ.

ಸುರೇಶ್ ರೈನಾ ಈ ಘಟನೆಯಿಂದ ಬೇಸರಗೊಂಡಿದ್ದಾರೆ. ತಮ್ಮ ಬಗ್ಗೆ ಹರಿದಾಡುತ್ತಿರುವ ಸುಳ್ಳು ಸುದ್ದಿಯಿಂದ ರೈನಾ ಹೊರ ಬಂದು ಆಟದ ಕಡೆಗೆ ಮಾತ್ರ ಗಮನ ಕೊಡಲಿ ಅನ್ನೋದು ಅಭಿಮಾನಿಗಳ ಆಶಯವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ