ವಿಶ್ವ ಸಮರಕ್ಕೂ ಮುನ್ನ ಟೀಂ ಇಂಡಿಯಾದಲ್ಲಿ ಶುರುವಾಗಿದೆ ಸ್ಲಾಟ್ ಫೈಟ್

ಟೀಂ ಇಂಡಿಯಾದಲ್ಲಿ ಈಗ ಬಿಗ್ ಫೈಟ್ ಶುರುವಾಗಿರೋದು ನಿಮಗೆಲ್ಲ ಗೊತ್ತಿರೋ ವಿಚಾರ. ಪ್ರತಿಷ್ಠಿತ ವಿಶ್ವಕಪ್ನಲ್ಲಿ ಆಡಬೇಕೆಂದು ತಂಡದ ಆಟಗಾರರು ಹೇಗಾದ್ರು ಮಾಡಿ ವಿಶ್ವಕಪ್ ಟಿಕೆಟ್ ಗಿಟ್ಟಿಸಿಕೊಳ್ಳಬೇಕು ಅಂತಾ ಇನ್ನಿಲ್ಲದ ಹೋರಾಟ ಮಾಡುತ್ತಿದ್ದಾರೆ.

ಸದ್ಯ ಆಸಿಸ್ ಮತ್ತು ಕಿವೀಸ್ ಸರಣಿಯನ್ನ ಪೂರೈಸಿ ಬಂದಿರುವ ಟೀಂ ಇಂಡಿಯಾ ಆಟಗಾರರು ರಿಲ್ಯಾಕ್ಸ್ ಆಗುತ್ತಿದ್ದಾರೆ. ಇತ್ತ ವಿಶ್ವಕಪ್ ಬಗ್ಗೆ ಈಗಲೇ ಚರ್ಚೆಗಳು ಶುರುವಾಗಿದ್ದು ಯಾರನ್ನ ಆಡಿಸಬೇಕು. ಯಾರನ್ನ ಆಡಿಸಬಾರದೆಂಬ ಚರ್ಚೆಗಳು ಭಾರೀ ಕುತೂಹಲ ಹುಟ್ಟಿಸಿವೆ.

ಬ್ಯಾಟಿಂಗ್ ಸ್ಲಾಟ್ ಬಗ್ಗೆ ಶುರುವಾಗಿದೆ ಫೈಟ್
ಆಟಗಾರರು ಯಾರ ಆಡಬೇಕೆನ್ನುವ ಚೆರ್ಚೆ ಶುರವಾಗಿರುವ ಬೆನ್ನಲ್ಲೆ ಇದೀಗ ಬ್ಯಾಟಿಂಗ್ ಸ್ಲಾಟ್ ಬಗ್ಗೆಯೂ ಭಾರೀ ಚೆರ್ಚಗಳು ನಡೆಯುತ್ತಿವೆ. ಅದರಲ್ಲೂ ಕ್ಯಾಪ್ಟನ್ ಕೊಹ್ಲಿ ಯಾವ ಸ್ಲಾಟ್ನಲ್ಲಿ ಆಡಬೇಕೆನ್ನುವುದರ ಬಗ್ಗೆ ವಿಚಾರ ವಿನಿಯಮಗಳ ಬಗ್ಗೆ ಜೋರಾಗಿ ನಡೆಯುತ್ತಿವೆ. ಅದರಲ್ಲೂ ತಂಡವನ್ನ ಕಳೆದ ನಾಲ್ಕು ವರ್ಷಗಳಿಂದ ಕಾಡುತ್ತಿರುವ ನಾಲ್ಕನೆ ಸ್ಲಾಟ್ ಕ್ಯಾಪ್ಟನ್ ಕೊಹ್ಲಿ ಮತ್ತು ಕೋಚ್ ರವಿ ಶಾಸ್ತ್ರಿ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ ಈಗ ಬಹಿರಂಗವಾಗಿದೆ.

ನಂ.4ನಲ್ಲಿ ಕೊಹ್ಲಿ ಆಡಬೇಕೆಂದ ಕೋಚ್ ರವಿ ಶಾಸ್ತ್ರಿ
ಕೋಚ್ ರವಿ ಶಾಸ್ತ್ರಿ ಕಿವೀಸ್ ಸರಣಿ ಮುಗಿಯುತ್ತಿದ್ದಂತೆ ಹೊಸ ಬಾಂಬ್ವೊಮದನ್ನ ಸಿಡಿಸಿದ್ರು. ಮುಂಬರುವ ಪ್ರತಿಷ್ಠಿತ ವಿಶ್ವಕಪ್ನಲ್ಲಿ ಕ್ಯಾಪ್ಟನ್ ಕೊಹ್ಲಿ ನಾಲ್ಕನೆ ಸ್ಲಾಟ್ನಲ್ಲಿ ಆಡಬೇಕೆಂದು ಹೇಳಿ ಭಾರೀ ಚರ್ಚೆಗೆ ಗ್ರಾಸವಾದ್ರು. ಕ್ಯಾಪ್ಟನ್ ನಾಯಕನಾದ ಮೇಲೆ ನಂ.3ರ ಸ್ಲಾಟ್ನಲ್ಲಿ ಆಡಿ ವಿಶ್ವದ ಎಲ್ಲ ಮೈದಾನಗಳಲ್ಲೂ ರನ್ ಮಳೆಯನ್ನೆ ಹರಿಸಿ ವಿಶ್ವ ದಾಖಲೆಗಳನ್ನೆ ಬರೆದಿದ್ದಾರೆ.

ಇದೀಗ ಕೋಚ್ ಶಾಸ್ತ್ರಿ ತಮ್ಮ ನೆಚ್ಚಿನ ಶಿಷ್ಯಾ ಕೊಹ್ಲಿ ನಾಲ್ಕನೆ ಸ್ಲಾಟ್ನಲ್ಲಿ ಆಡಬೇಕೆಂದು ಆಸೆ ಪಟ್ಟಿದ್ದಾರೆ. ಆದರೆ ಈ ಸ್ಲಾಟ್ನಲ್ಲಿ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಅಂಬಾಟಿ ರಾಯ್ಡು ಕಳೆದ ಕೆಲವು ತಿಂಗಳಿನಿಂದ ಆಡಿ ಸಕ್ಸಸ್ ಆಗಿ ಈ ಸ್ಲಾಟ್ನಲ್ಲಿ ಫಿಕ್ಸ್ ಆಗಿದ್ದಾರೆ.

ಕೋಚ್ ಶಾಸ್ತ್ರಿ ಪ್ಲಾನ್ ವಿರೋಧಿಸಿದ ಮಾಜಿ ನಾಯಕ ಗಂಗೂಲಿ
ಕೋಚ್ ರವಿ ಶಾಸ್ತ್ರಿ ತಮ್ಮ ಶಿಷ್ಯಾ ಕೊಹ್ಲಿ ನಾಲ್ಕನೆ ಸ್ಲಾಟ್ ನಲ್ಲಿ ಆಡಬೇಕೆಂದು ಬಯಸಿದ ಬೆನ್ನಲ್ಲೆ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಶಾಸ್ತ್ರಿ ಪ್ಲಾನ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಶಾಸ್ತ್ರಿ ಜೋತೆ ಈ ಹಿಂದೆಯು ತಂಡದ ವಿಚಾರದಲ್ಲಿ ಅಸಮಾಧಾನ ಹೊರ ಹಾಕಿದ್ದ ದಾದಾ ಇದೀಗ ಕ್ಯಾಪ್ಟನ್ ಕೊಹ್ಲಿ ಬ್ಯಾಟಿಂಗ್ ಮಾಡುವ ವಿಚಾರದಲ್ಲಿ ಶಾಸ್ತ್ರಿ ಜೊತೆ ಗುದ್ದಾಟ ಶುರು ಮಾಡಿ ಕೊಂಡಿದ್ದಾರೆ.

ಶಾಸ್ತ್ರಿ ಅವರ ನಡೆ ಸರಿಯಾದ ನಡೆ ಎಂದು ನನಗೆ ಅನಿಸುವುದಲ್ಲ ಯಾಂಕಂದ್ರೆ ಕೊಹ್ಲಿ ನಂ.3ಯಲ್ಲಿ ಸಕ್ಸಸ್ ಕಂಡವರು. ತಂಡದ ಶಕ್ತಿ ಇರೋದೇ ಶಿಖರ್ ಧವನ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೇಲೆ ಎಂದು ಗಂಗೂಲಿ ಹೇಳಿದ್ದಾರೆ. ಇಂಗ್ಲೆಂಡ್ ಕಂಡೀಶನ್ನಲ್ಲಿ ತಂಡ ಆರಂಭಿಕ ಆಘಾತವನ್ನ ಅನುಭವಿಸೋದನ್ನ ನಾನು ನೋಡಲು ಇಷ್ಟ ಪಡುವುದಿಲ್ಲ ಎಂದು ಗಂಗೂಲಿ ಎಚ್ಚರಿಕೆ ನೀಡಿದ್ದಾರೆ.

ಮಾಜಿ ಕ್ಯಾಪ್ಟನ್ ಗಂ.ಗೂಲಿ ಮಾತಿಗೆ ಕೋಚ್ ಶಾಸ್ತ್ರಿ ಹೇಗೆ ಪ್ರತಿಕ್ರಿಯಿಸುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ