ಬೆಂಗಳೂರು, ಫೆ.12- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇದೇ 18ರಿಂದ ಮೂರು ದಿನಗಳ ಕಾಲ ಕರ್ತವ್ಯ ಸ್ಥಗಿತಗೊಳಿಸುವ ಮೂಲಕ ರಾಜ್ಯಾದ್ಯಂತ ಮುಷ್ಕರ ನಡೆಸಲು ಬಿಎಸ್‍ಎನ್‍ಎಲ್ ಅಧಿಕಾರಿ-ಅಧಿಕಾರೇತರ ಒಕ್ಕೂಟ ನಿರ್ಧರಿಸಿದೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಎಸ್‍ಎನ್‍ಎಲ್‍ನ ಜಿಲ್ಲಾ ಕಾರ್ಯದರ್ಶಿ ಎಚ್.ವಿ.ಸುದರ್ಶನ್ 12ವರ್ಷಗಳಿಂದಲೂ 3ನೇ ವೇತನ ಪರಿಷ್ಕರಣೆ ಆಗಿಲ್ಲ. ಇದನ್ನೂ ಪರಿಷ್ಕರಿಸಬೇಕು.ಕೇಂದ್ರ ಸರ್ಕಾರ ನಮಗೆ 4ಜಿ ತರಂಗ ಗುಚ್ಚವನ್ನು ನೀಡಬೇಕು ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಜಿಯೋ, ರಿಲಾಯಾನ್ಸ್‍ಗೆ 4ಜಿ ತರಂಗ ನೀಡುವುದರ ಮೂಲಕ ಬಿಎಸ್‍ಎನ್‍ಎಲ್ ಮುಚ್ಚಲು ಹುನ್ನಾರ ನಡೆಸುತ್ತಿದೆ.ನಮಗೂ 4ಜಿ ತರಂಗ ನೀಡಬೇಕು ಎಂದು ಒತ್ತಾಯಿಸಿದರು.
ಕೇಂದ್ರದಿಂದ ಹಣಕಾಸಿನ ಸಹಾಯವಾಗಬೇಕು.ಖಾಸಗಿ ಕಂಪನಿಗೆ ಹೆಚ್ಚು ಒತ್ತು ನೀಡುವುದನ್ನು ನಿಲ್ಲಿಸಬೇಕು ಇದರಿಂದ ನಮ್ಮ ನೌಕರರಿಗೆ ಅನ್ಯಾಯವಾಗುತ್ತಿದೆ. ಆದುದರಿಂದ ನಮ್ಮ ಕಂಪನಿಯನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸಿ.ಕೆ.ಗುಂಡಣ್ಣ, ಎ.ಪಿ.ಕೃಷ್ಣಾರೆಡ್ಡಿ, ಎಸ್.ಪ್ರಸಾದ್, ಅಶೋಕ್, ಆರ್.ಮೋಹನ್ ಸೇರಿದಂತೆ ಮತ್ತಿತರರು ಇದ್ದರು.