
ಹ್ಯಾಮಿಲ್ಟನ್: ಇಂದು ಇಂಡೋ- ಕಿವೀಸ್ ನಡುವೆ ಮೂರನೇ ಮತ್ತು ಅಂತಿಮ ಟಿ20 ಪಂದ್ಯ ನಡೆಯಲಿದೆ. ಈಗಾಗಲೇ ಸರಣಿ ಸಮಬಲ ಮಾಡಿಕೊಂಡಿರುವ ಉಭಯ ತಂಡಗಳು ಟ್ರೋಫಿಗಾಗಿ ಹೋರಾಟ ಮಾಡಲಿವೆ.
ಹಿಂದಿನ ಪಂದ್ಯ ಕ್ಯಾಪ್ಟನ್ ರೋಹಿತ್ಗೆ ಪ್ರತಿಷ್ಠೆಯ ಪಂದ್ಯವಾಗಿದೆ ಯಾಕಂದ್ರೆ ರೋಹಿತ್ ಟಿ20 ಆವೃತ್ತಿಯಲ್ಲಿ ನಾಯಕನಾಗಿ ಸರಣಿಯನ್ನ ಕೈಚೆಲ್ಲಿಲ್ಲ. ಈ ಪಂದ್ಯವನ್ನ ಗೆದ್ದರೇ ರೋಹಿತ್ ಮುಡಿಗೆ ಮತ್ತೊಂದು ದಾಖಲೆ ಮುಡಿಗೇರಲಿದೆ.
ಮತ್ತೊಂದು ಅಚ್ಚರಿ ವಿಷಯವೆನೆಂದರೇ ಕಿವಿಸ್ ನಾಡಲ್ಲಿ ಟೀಂ ಇಂಡಿಯಾ ಇದುವರೆಗೂ ಟಿ20 ಸರಣಿ ಗೆದ್ದಿಲ್ಲ. ಮೊನ್ನೆಯಷ್ಟೆ ಮೊದಲ ಬಾರಿಗೆ ಆತಿಥೇಯರ ನೆಲದಲ್ಲಿ ಮೊದಲ ಗೆಲುವು ದಾಖಲಿಸಿದ್ದ ರೋಹಿತ್ ಪಡೆ ಇದೀಗ ಸರಣಿ ಮೇಲೆ ಕಣ್ಣಿಟ್ಟಿದೆ. ಒಂದು ವೇಳೆ ಇಂದಿನ ಪಂದ್ಯ ಗೆದ್ದರೆ
ಕಿವೀಸ್ ನಾಡಲ್ಲಿ ಚೊಚ್ಚಲ ಟಿ20 ಸರಣಿ ಗೆದ್ದ ಸಾಧನೆ ಮಾಡಲಿದೆ.