ರಿವೀಲ್ ಆಯ್ತು ಹಿಟ್‍ಮ್ಯಾನ್ ರೋಹಿತ್ ಶರ್ಮಾ ಹಿಂದಿನ ಯಶಸ್ಸಿನ ಗುಟ್ಟು

ಹ್ಯಾಮಿಲ್ಟನ್:ಟೀಂ ಇಂಡಿಯಾದ ಹಿಟ್‍ಮ್ಯಾನ್ ರೋಹಿತ್ ಶರ್ಮಾ ಮೊನ್ನೆ ನ್ಯೂಜಿಲೆಂಡ್ ವಿರುದ್ಧ ಅದ್ಬುತ ಪ್ರದರ್ಶನ ನೀಡಿರುವ ಹಿಂದಿನ ಸೀಕ್ರೇಟ್ ರಿವೀಲ್ ಆಗಿದೆ.

ಹ್ಯಾಮಿಲ್ಟನ್‍ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಅರ್ಧ ಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ರು.

ಹಿಟ್‍ಮ್ಯಾನ್ ರೋಹಿತ್ ಶರ್ಮಾ ಯಶಸ್ಸು ಕಾಣಲು ಜೆರ್ಸಿ ಸಂಖ್ಯೆಯನ್ನೆ ಬದಲಿಸಿದ್ದು ಕಾರಣ ಎಂದು ತಿಳಿದು ಬಂದಿದೆ.ಕಳೆದ 10 ವರ್ಷದಿಂದ ರೋಹಿತ್ ಶರ್ಮಾ ಜೆರ್ಸಿ ಸಂಖ್ಯೆ 45ರಲ್ಲಿ ಆಡುತ್ತಿದ್ದರು.

ಆದರೆ ಮೊನ್ನೆ ನ್ಯೂಜಿಲೆಂಡ್ ವಿರುದ್ದದ ಪಂದ್ಯದಲ್ಲಿ ಈ ಮುಂಬೈ ಆಟಗಾರ ಜೆರ್ಸಿ ಸಂಖ್ಯೆ 59 ತೊಟ್ಟು ಆಡಿದ್ದಾರೆ. ಇದೇ ಜೆರ್ಸಿ ಸಂಖ್ಯೆಯಲ್ಲಿ ತಂಡದ ಆಲ್‍ರೌಂಡರ್ ವಿಜಯ ಶಂಕರ್ ಕೂಡ ಹೊಂದಿದ್ದಾರೆ. ಒಂದೇ ಜೆರ್ಸಿ ಸಂಖ್ಯೆಯಲ್ಲಿ ಇಬ್ಬರು ಅಟಗಾರರು ಆಡುವಂತಿಲ್ಲ ಇದಕ್ಕೆ ತಂಡದ ಆಡಳಿತ ಮಂಡಳಿ ಬಿಡೋದಿಲ್ಲ ಆದರೆ ಮೊನ್ನೆ ರೋಹಿತ್ ಶರ್ಮಾ ಮತ್ತು ವಿಜಯ್ ಶಂಕರ್ ಜೆರ್ಸಿ ನಂ.59 ತೊಟ್ಟು ಆಡಿದ್ದರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ