ಕುಮಾರ ಷಷ್ಠಿ ಅಂಗವಾಗಿ ಘಾಟಿ ಸುಬ್ರಮಣ್ಯ ಸ್ವಾಮಿಯ ತೆಪ್ಪೋತ್ಸವ

ದೊಡ್ಡಬಳ್ಳಾಪುರ: ನಾಗಾರಾಧನೆಗೆ ಹೆಸರುವಾಸಿಯಾಗಿರುವ ತಾಲೂಕಿನ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಘಾಟಿ ಸುಬ್ರಹ್ಮಣ್ಯ ದಲ್ಲಿ ಸ್ವಾಮಿಯ ತೆಪ್ಪೋತ್ಸವ ನಡೆಯಿತು ರಥಸಪ್ತಮಿಯ ಹಿಂದಿನ ದಿನವಾದ ಕುಮಾರ ಷಷ್ಠಿ ಯಂದು ಸ್ವಾಮಿಗೆ ವಿಶೇಷ ಅಲಂಕಾರಗಳನ್ನು ಮಾಡಿ ಪ್ರಮುಖ ರಾಜ ಬೀದಿಗಳಲ್ಲಿ ಮೆರವಣಿಗೆ ಮಾಡಿ ನಂತರ ಸುಬ್ರಹ್ಮಣ್ಯ ಸ್ವಾಮಿಯನ್ನು ವಿವಿಧ ಬಗೆಯ ಪುಷ್ಪಗಳಿಂದ ಹಾಗೂ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿರುವ ಕಲ್ಯಾಣಿಯಲ್ಲಿ ತೆಪ್ಪದ ಮೇಲೆ ಕೂರಿಸಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಸ್ವಾಮಿ ಯ ತೆಪ್ಪೋತ್ಸವ ನಡೆಸಲಾಯಿತು ಪ್ರತಿವರ್ಷದಂತೆ ಶುದ್ದ ಪುಷ್ಯ ಮಾಸದ ಷಷ್ಠಿ ಯಂದು ನಡೆಯುವ ಬ್ರಹ್ಮ ರಥೋತ್ಸವ ದಲ್ಲಿ ಪಾಲ್ಗೊಳ್ಳಲು ಆಗದ ಭಕ್ತರು ಕುಮಾರ ಷಷ್ಠಿ ಯಂದು ಕ್ಷೇತ್ರಕ್ಕೆ ಆಗಮಿಸಿ ನಾಗಾರಾಧನೆ ನೆರವೇರಿಸುವರು ಎನ್ನುವ ಪ್ರತೀತಿ ಇದೆ.

ಆದ್ದರಿಂದ ಬ್ರಹ್ಮ ರಥೋತ್ಸವ ನಡೆದ ತಿಂಗಳ ನಂತರ ಸರಿಯಾಗಿ ಕುಮಾರ ಷಷ್ಠಿಯಂದು ಸ್ವಾಮಿಯ ದರ್ಶನ ಪಡೆದು ಪುನೀತರಾಗುತ್ತಾರೆ ಬ್ರಹ್ಮ ರಥೋತ್ಸವದಂದು ನಡೆಯುವಂತೆ ಹಲವು ಸಂಘ ಸಂಸ್ಥೆಗಳು ಹಾಗೂ ದೇವಾಲಯದ ಆಡಳಿತ ಮಂಡಳಿ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ನೆರವೇರಿಸಲಾಗುವುದು.
*40,9 ಲಕ್ಷ ಹುಂಡಿ ಹಣ ಸಂಗ್ರಹಣೆ*
ಪ್ರತಿ ತಿಂಗಳಿನಂತೆ ದೇವಾಲಯದ ಆಡಳಿತ ಮಂಡಳಿ ತಿಂಗಳಿನ ಕೊನೆಯಲ್ಲಿ ಹುಂಡಿ ಹಣದ ಎಣಿಕೆಯನ್ನು ಗುರು ವಾರ ಮಾಡಲಾಯಿತು ಜಾತ್ರೆಯಾದ ನಂತರ ಎಣಿಕೆ ಮಾಡಿದ ಹಣವು 40 ಲಕ್ಷದ 95 ಸಾವಿರದ 125 ರೂಪಾಯಿ ಹಣ ಸಂಗ್ರಹವಾಗಿ ದೆ ಇದರಲ್ಲಿ ನಿಷೇಧಿಸಲಾಗಿರುವ 500 ಮತ್ತು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳು 17000 ಸಂಗ್ರಹವಾಗಿದೆ ಅಮೇರಿಕಾ ದೇಶದ 5 ಡಾಲರ್ 200 ಮಿಲಿ ಗ್ರಾಂ ಚಿನ್ನ ಮತ್ತು 1 ಕೆಜಿ 740 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ