ನೆಲಮಂಗಲ,ಫೆ.10- ಬೇರೊಬ್ಬನ ಜೊತೆ ಚಾಟಿಂಗ್ ಮಾಡುತ್ತಾಳೆ ಎಂದು ಆರೋಪಿಸಿ ಪತಿರಾಯ ಪತ್ನಿ ವಿರುದ್ಧ ಪೆÇಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ನೆಲಮಂಗಲ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪತಿ ಸರ್ಕಾರಿ ಶಾಲೆಯ ಶಿಕ್ಷಕ, ಪತ್ನಿ ಖಾಸಗಿ ಸಂಸ್ಥೆಯ ಉದ್ಯೋಗಿ.
ನೆಲಮಂಗಲ ನಿವಾಸಿಗಳಾದ ಇವರು 14 ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು.
ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇವರಿಬ್ಬರ ಜಗಳದಿಂದಾಗಿ ದೊಡ್ಡಮಗಳು ಅಪ್ಪನ ಜೊತೆ ಹೋದರೆ ಚಿಕ್ಕ ಮಗಳು ಅಮ್ಮನ ಜೊತೆಯಲ್ಲಿದ್ದಾಳೆ.
ಇಬ್ಬರದ್ದು ಅನ್ಯ ಜಾತಿಯಾಗಿದ್ದರೂ ಇವರ ಪ್ರೀತಿಗೆ ಕೊರತೆ ಇರಲಿಲ್ಲ. ಆದರೆ ಇತ್ತೀಚೆಗೆ ಪತ್ನಿ ಮತ್ತೊಬ್ಬನ ಜೊತೆ ಚಾಟಿಂಗ್, ಲವ್ ಲೆಟರ್ ಬರೆಯೊಕ್ಕೆ ಶುರುಮಾಡಿದ್ದಾಳೆ ಎಂದು ಆರೋಪಿಸಿ ಪತಿ ಪೆÇಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಮೊದಲು ನರಗುಂದದಲ್ಲಿ ಕೆಲಸ ಮಾಡುತ್ತಿದ್ದ ಪತಿ ನಂತರ ದೊಡ್ಡಬಳ್ಳಾಪುರಕ್ಕೆ ವರ್ಗವಾದ. ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ ಪತಿಗೆ ಪತ್ನಿಯ ಮೇಲೆ ಅನುಮಾನವಿತ್ತು.
ಪತ್ನಿ ಚಾಟಿಂಗ್ ಮಾಡುತ್ತಿದ್ದರಿಂದ ಆಕೆಗೆ ಬುದ್ದಿ ಹೇಳಿ ತಿದ್ದುವ ಪ್ರಯತ್ನವನ್ನೂ ಮಾಡಿದ್ದ.ಈ ಮಧ್ಯೆ ಹತ್ತು ವರ್ಷಗಳ ಹಿಂದೆ ಪತ್ನಿ ಪ್ರೀತಿಸುತ್ತಿದ್ದಳು ಎಂದು ಹೇಳಲಾದ ಪ್ರೇಮ ಪತ್ರವೊಂದು ಪತಿ ಕೈಗೆ ಸಿಕ್ಕಿದೆ.
ಇದರಿಂದ ಇಬ್ಬರ ನಡುವಿನ ಜಗಳ ತಾರಕಕ್ಕೆ ಹೋಗಿ ಹಲ್ಲೆ ವರೆಗೂ ಮುಟ್ಟಿದೆ. ಪತ್ನಿ ವಿರುದ್ಧ ಪತಿ ನೆಲಮಂಗಲ ಠಾಣೆಯಲ್ಲಿ ದೂರು ನೀಡಿದ್ದು, ಅದೇ ಠಾಣೆಯಲ್ಲಿ ಪತ್ನಿ ಕೂಡ ತನ್ನ ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ಪೆÇಲೀಸರು ಪತಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.