ಹಟ್ಟಿ ಚಿನ್ನದ ಗಣಿಯಲ್ಲಿ ಮಣ್ಣು ಕುಸಿತ: ಘಟನೆಯಲ್ಲಿ ಒಬ್ಬರ ಸಾವು ಹಲವರಿಗೆ ಗಾಯ

ರಾಯಚೂರು,ಫೆ.10- ಹಟ್ಟಿ ಚಿನ್ನದ ಗಣಿಯಲ್ಲಿ ಮಣ್ಣು ಕುಸಿದು ಸೀನಿಯರ್ ಸೂಪರ್‍ವೈಸರ್ ಮೃತಪಟ್ಟು ಹಲವು ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ದಾವಲ್ ಸಾಬ್(46) ಮೃತಪಟ್ಟ ಸೂಪರ್‍ವೈಸರ್ ಬೆಳಗ್ಗೆ ಲಿಂಗಸೂರು ತಾಲ್ಲೂಕಿನ ಹಟ್ಟಿ ಗ್ರಾಮದಲ್ಲಿ ಗಣಿ ಕೆಲಸದಲ್ಲಿದ್ದಾಗ ಮಣ್ಣು ಕುಸಿದಿದ್ದರಿಂದ ಈ ದುರಂತ ಸಂಭವಿಸಿದೆ. ಪರಿಣಾಮ ದಾವಲ್ ಸಾಬ್ ಮೃತಪಟ್ಟಿದ್ದು, ಹಲವು ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಸುದ್ದಿ ತಿಳಿದ ಕೂಡಲೇ ಪೆÇಲೀಸರು ಸ್ಥಳಕ್ಕೆ ಧಾವಿಸಿ ಮಣ್ಣಿನಡಿ ಸಿಲುಕಿರುವರ ರಕ್ಷಣೆ ಮುಂದಾಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ