ಹುಬ್ಬಳ್ಳಿ, ಫೆ.10- ಶಾಸಕರಾದ ನಾಗನಗೌಡ ಅವರ ಮಗನೊಂದಿಗೆ ಮಾತನಾಡಿದ್ದು ನಿಜ. ಆದರೆ, ಕೆಲವು ಸತ್ಯಗಳನ್ನು ಮರೆಮಾಚಿ ಆಡಿಯೋ ಬಿಡುಗಡೆ ಮಾಡಲಾಗಿದೆ. ದಾಖಲೆಗಳು ನನ್ನ ಬಳಿಯೂ ಇವೆ. ನಾಳೆ ಸದನದಲ್ಲಿ ಬಂಡವಾಳ ಬಯಲು ಮಾಡುತ್ತೇನೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ತಮ್ಮ ಮೇಲಿನ ಆಡಿಯೋ ಪ್ರಕರಣ ಆರೋಪಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಏರ್ಪೆÇೀರ್ಟ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೌದು.ನಾನೇ ಮಾತನಾಡಿದ್ದು.ಇದರಲ್ಲಿ ಸತ್ಯಾಂಶವನ್ನು ಮರೆಮಾಚಲಾಗಿದೆ.ಶಾಸಕರ ಮಗನನ್ನು ಕಳುಹಿಸಿ ಅವರಿಗೆ ಬೇಕಾದ ರೀತಿ ಆಡಿಯೋ ಮಾಡಿಸಿಕೊಂಡು ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ಮಾಡಲಾಗಿದೆ.ಕುಮಾರಸ್ವಾಮಿಯವರು ಬ್ಲಾಕ್ಮೇಲ್ ರಾಜಕಾರಣ ಮಾಡುತ್ತಿದ್ದಾರೆ. ಈವರೆಗೆ ಯಾವುದೇ ಮುಖ್ಯಮಂತ್ರಿ ಈ ರೀತಿ ನಡೆದುಕೊಂಡಿರಲಿಲ್ಲ ಎಂದರು.
ನನ್ನ ಬಳಿಯೂ ಹಲವು ದಾಖಲೆಗಳಿವೆ. ನಾಳೆ ಎಲ್ಲವನ್ನೂ ಸದನದ ಮುಂದೆ ಇಡುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು.
ಜೆಡಿಎಸ್ ಶಾಸಕ ನಾಗನಗೌಡ ಕುಂದಕೂರ್ ಅವರನ್ನು ಸೆಳೆಯಲು ಅವರ ಪುತ್ರನಿಗೆ ಆಮಿಷವೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.8ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗೃಹ ಕಚೇರಿ ಕೃಷ್ಣಾದಲ್ಲಿ ಆಡಿಯೋ ಬಿಡುಗಡೆ ಮಾಡಿದ್ದರು.ನಂತರ ಯಡಿಯೂರಪ್ಪನವರು ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಅದು ನನ್ನದೆಂದು ಸಾಬೀತಾದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಸವಾಲು ಹಾಕಿದ್ದರು.
ಈಗ ಶರಣಗೌಡ ಅವರ ಜತೆ ಮಾತನಾಡಿರುವುದು ನಾನೇ ಎಂದು ಒಪ್ಪಿಕೊಂಡಿದ್ದಾರೆ.ಮಧ್ಯರಾತ್ರಿ ನನ್ನನ್ನು ಎಬ್ಬಿಸಿ ಮಾತನಾಡಿಸಿ ನನ್ನ ವಿರುದ್ಧ ವ್ಯವಸ್ಥಿತ ಪಿತೂರಿ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಸ್ವತಃ ಪ್ರಜ್ವಲ್ ರೇವಣ್ಣ ಅವರೇ ನಮ್ಮದು ಸೂಟ್ಕೇಸ್ ಸಂಸ್ಕøತಿ.
ಸೂಟ್ಕೇಸ್ ಇಲ್ಲದೆ ಯಾವುದೇ ಕೆಲಸ ಆಗಲ್ಲ ಎಂದು ಹೇಳಿದ್ದರು ಎಂಬುದನ್ನು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ತಿಳಿಸಿದರು.