ಅಮರಾವತಿ: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದ ಹಾಗೂ ಆಂಧ್ರ ವಿಭಜನೆ ವೇಳೆ ನೀಡಿದ ಭರವಸೆಗಳನ್ನು ಈಡೇರಿಸದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿರುವ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಜನರನ್ನು ಕೊಂಡೊಯ್ಯಲು ಎರಡು ರೈಲುಗಳನ್ನು ಬುಕ್ ಮಾಡಿದ್ದಾರೆ.
ಕೇಂದ್ರದ ವಿರುದ್ಧ ದೆಹಲಿಯಲ್ಲಿ ನಡೆಯಲಿರುವ ಪ್ರತಿಭಟನೆಗೆ ಆಂಧ್ರಪ್ರದೇಶದಿಂದ ಜನರನ್ನು ಕರೆದೊಯ್ಯಲು ಸಿಎಂ ನಾಯ್ಡು 1.12 ಕೋಟಿ ರೂ. ಕೊಟ್ಟು 2 ವಿಶೇಷ ರೈಲುಗಳನ್ನು ಬುಕ್ ಮಾಡಿದ್ದಾರೆ.
ಫೆಬ್ರವರಿ 11ರಂದು ದೆಹಲಿಯಲ್ಲಿ ಒಂದು ದಿನದ ಪ್ರತಿಭಟನೆ ನಡೆಯಲಿದೆ. ಪ್ರತಿಭಟನೆಯಲ್ಲಿ ಭಾಗವಹಿಸುವ ರಾಜಕೀಯ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನು ಕರೆದೊಯ್ಯಲು ರೈಲುಗಳನ್ನು ಬುಕ್ ಮಾಡಲಾಗಿದೆ. ಒಂದು ರೈಲು ಅನಂತಪುರಂನಿಂದ ಹೊರಡಲಿದ್ದರೆ, ಮತ್ತೊಂದು ರೈಲು ಶ್ರೀಕಾಕುಲಂನಿಂದ ಹೊರಡಲಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪ್ರತಿಪಕ್ಷಗಳ ನಾಯಕರೂ ಪಾಲ್ಗೊಳ್ಳುವಂತೆ ನಾಯ್ಡು ಕರೆ ನಿಡಿದ್ದಾರೆ.
CM Chandrababu Naidu, protest, against the Centre,Spends Rs. 1.12 Crore On Trains