
ಬೆಂಗಳೂರು, ಫೆ.9-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಎಲ್ಲಾ ವರ್ಗದವರ ಹಿತಕಾಯುವ ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಿಂಬಿತವಾದ ಪ್ರೋತ್ಸಾಹದಾಯಕ ಬಜೆಟ್ ನೀಡಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ ಹೇಳಿದ್ದಾರೆ.
ಬಜೆಟ್ ಕುರಿತು ಪ್ರತಿಕ್ರಿಯೆಸಿದವರು ಅವರು ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಿ ರೈತ ಬದುಕು ಹಸನಗೊಳಿಸುವ ಪ್ರಯತ್ನ ಮಾಡಿದ್ದಾರೆ ಕೃಷಿಗಾರರ ಸಾಲಮನ್ನಾ ಮಾಡಲು ಆದ್ಯತೆ ನೀಡಿ ಅವರ ಸಂಕಷ್ಟಕ್ಕೆ ನೆರವಾಗಿದ್ದಾರೆ.
ನೀರಾವರಿ, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ದಿ ಎಲ್ಲ ವರ್ಗದವರ ಅಭಿವೃದ್ಧಿಯನ್ನ ಮನಸ್ಸಿನಲ್ಲಿಟ್ಟುಕೊಂಡು ಅರ್ಥಪೂರ್ಣ ಬಜೆಟ್ ಮಂಡಿಸಿದ್ದಾರೆ ಅವರು ಹೇಳಿದ್ದಾರೆ.