![183632986](http://kannada.vartamitra.com/wp-content/uploads/2019/02/183632986-571x381.jpg)
ಹಾಸನ, ಫೆ.7- ಕಂಟೈನರ್ನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವುಗಳನ್ನು ಸಕಲೇಶಪುರ ಗ್ರಾಮಾಂತರ ಠಾಣೆ ಪೆÇಲೀಸರು ರಕ್ಷಿಸಿದ್ದಾರೆ.
ಹಾಸನದಿಂದ ಮಂಗಳೂರಿಗೆ ಕಂಟೈನರ್ನಲ್ಲಿ ಗೋವುಗಳನ್ನು ಸಾಗಿಸುತ್ತಿರುವುದರ ಬಗ್ಗೆ ಬಂದಖಚಿತ ಮಾಹಿತಿ ಆಧರಿಸಿ ಪಿಎಸ್ಐ ಬ್ಯಾಟರಾಯಗೌಡ ನೇತೃತ್ವದತಂಡ ದಾಳಿ ನಡೆಸಿ ಗೋವುಗಳನ್ನು ವಶಪಡಿಸಿಕೊಂಡು ಗೋ ಶಾಲೆಗೆ ಹಸ್ತಾಂತರಿಸಿದ್ದಾರೆ.
ಒಟ್ಟು 12 ಎಮ್ಮೆಗಳು ಹಾಗೂ ಒಂದು ಹೋರಿಗಳನ್ನು ರಕ್ಷಿಸಿ ಗೋ ಶಾಲೆಗೆ ಬಿಡಲಾಗಿದೆ. ಹೊಳೆನರಸೀಪುರ ಮೂಲದ ಲಾರಿ ಚಾಲಕ ಹೇಮಂತ್ ಎಂಬಾತನನ್ನು ಬಂಧಿಸಿ ವಿಚಾರಣೆ ಗೊಳಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಅಕ್ರಮವಾಗಿ ಗೋ ಸಾಗಾಟ ನಡೆಯುತ್ತಿದ್ದು, ಇದಕ್ಕೆಕಡಿವಾಣ ಹಾಕಬೇಕೆಂದು ಗೋ ಪ್ರೇಮಿಗಳು ಆಗ್ರಹಿಸಿದ್ದಾರೆ.