ಸೀಟ್ ಬೆಲ್ಟ್ ಮತ್ತು ಹೆಲ್ಮಟ್‍ ಧರಿಸದೆ ವಾಹನ ಚಾಲನೆ: ಸಂಚಾರಿ ಪೊಲೀಸರ ಕಾರ್ಯಾಚರಣೆ

ಮೈಸೂರು, ಫೆ.7-ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್‍ಧರಿಸದೆ ವಾಹನ ಚಾಲನೆ ಮಾಡುವವರ ವಿರುದ್ಧ ನಗರದ ಸಂಚಾರಿ ಪೆÇಲೀಸರು ಕಾರ್ಯಾಚರಣೆ ನಡೆಸಿ ಒಂದೇ ದಿನದಲ್ಲಿ 2.11 ಲಕ್ಷರೂ.ದಂಡ ಸಂಗ್ರಹಿಸಿದರು.

ವಿವಿಧೆಡೆ ಕಾರ್ಯಾಚರಣೆ ನಡೆಸಿದ ಸಂಚಾರಿ ಪೆÇಲೀಸರು ಹೆಲ್ಮೆಟ್‍ ರಹಿತ ಚಾಲಕರ ವಿರುದ್ಧ 663 ಕೇಸುಗಳನ್ನು ದಾಖಲಿಸಿ 66,300 ರೂ., ಹೆಲ್ಮೆಟ್‍ಧರಿಸದ ಹಿಂಬದಿ ಸವಾರರ ವಿರುದ್ಧ 1115 ಕೇಸು ದಾಖಲಿಸಿ 1,11500 ರೂ., ದಂಡ ಸಂಗ್ರಹಿಸಿದ್ದಾರೆ.
ಕಾರು, ಜೀಪುಗಳಲ್ಲಿ ಸೀಟ್‍ಬೆಲ್ಟ್ ಧರಿಸದೆ ಚಾಲನೆ ಮಾಡಿದಚಾಲಕರ ವಿರುದ್ಧ 338 ಕೇಸು ದಾಖಲಿಸಿ 33800ರೂ. ದಂಡ ಸಂಗ್ರಹಿಸಿದ್ದಾರೆ. ಒಟ್ಟಾರೆಒಂದೇ ದಿನದಲ್ಲಿ ಸಂಚಾರಿ ಪೆÇಲೀಸರು 2,11,600ರೂ. ದಂಡ ಸಂಗ್ರಹಿಸಿದ್ದಾರೆ.
ಮುಂದಿನ ದಿನಗಳಲ್ಲೂ ಸಹ ನಗರಾದ್ಯಂತ ಇದೇರೀತಿ ಕಾರ್ಯಾಚರಣೆ ನಡೆಸಲಾಗುವುದು ಎಂದು ನಗರ ಪೆÇಲೀಸ್‍ ಆಯುಕ್ತ ಕೆ.ಇ.ಬಾಲಕೃಷ್ಣ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ