ಸಿಸಿಬಿ ಪೊಲೀಸರಿಂದ ವೇಶ್ಯವಾಟಿಕೆ ನಡೆಸುತ್ತಿದ್ದ ಇಬ್ಬರ ಬಂಧನ

ಮೈಸೂರು, ಫೆ.7- ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಪಾಒಂದರ ಮೇಲೆ ದಾಳಿ ಮಾಡಿದ ಸಿಸಿಬಿ ಪೆÇಲೀಸರುಇಬ್ಬರನ್ನು ಬಂಧಿಸಿ ನೇಪಾಳ ಮೂಲದ ಮಹಿಳೆಯನ್ನು ರಕ್ಷಿಸಿದ್ದಾರೆ.
ನಗರದ ಹೆಬ್ಬಾಳು ನಿವಾಸಿ ಶಿವರಾಜ್ (28) ಹಾಗೂ ನಂಜನಗೂಡಿನ ಮಹದೇಶ್ವರ ಬಡಾವಣೆ ವಾಸಿ ಮಹದೇವ (32) ಬಂಧಿತ ಆರೋಪಿಗಳು.
ಬಂಧಿತರಿಂದ 12570 ರೂ. ಹಾಗೂ ಐದು ಮೊಬೈಲ್ ಫೆÇೀನ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಡಿ ಮೊಹಲ್ಲಾದ ಬಂಬೂ ಬಜಾರ್‍ರಸ್ತೆಯಲ್ಲಿನ ಮಸಾಜ್ ಪಾರ್ಲರ್ (ಸ್ಪಾ) ಒಂದರ ಮೇಲೆ ಸಿಸಿಬಿ ಎಸಿಪಿ ಲಿಂಗಪ್ಪ ನೇತೃತ್ವದಲ್ಲಿಇನ್ಸ್‍ಪೆಕ್ಟರ್ ಮಲ್ಲೇಶ್, ಮಂಡಿ ಠಾಣೆ ಇನ್ಸ್‍ಪೆಕ್ಟರ್‍ ಅರುಣ್ ಹಾಗೂ ಸಿಬ್ಬಂದಿ ದಾಳಿ ನಡೆಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ