2 ಜಿ ಹಗರಣ ಮೇಲ್ಮನವಿ ವಿಚಾರ: ಆರೋಪಿಗಳಿಗೆ 15 ಸಾವಿರ ಗಿದ ನೆಡಲಿ ಸೂಚಿಸಿದ ನ್ಯಾಯಾಲಯ

ನವದೆಹಲಿ: 2ಜಿ ತರಂಗಾಂತರ ಹಗರಣದ ಆರೋಪಿಗಳಿಗೆ ದೆಹಲಿ ಹೈಕೋರ್ಟ್ 15 ಸಾವಿರ ಗಿಡ ನೆಡುವಂತೆ ಆದೇಶ ನೀಡಿದೆ.

ಹಗರಣದಿಂದ ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಮೇಲ್ಮನವಿ ಅರ್ಜಿಗೆ ಪ್ರತಿಕ್ರಿಯಿಸಲು ವಿಳಂಬ ಮಾಡಿದ್ದಕ್ಕಾಗಿ ಸ್ವಾನ್​ ಟೆಲಿಕಾಂ ಪ್ರೈ. ಲಿ.ನ ಶಾಹಿದ್​ ಬಲ್ವಾ, ಕುಸೆಗಾಂವ್​ ಫ್ರೂಟ್ಸ್​ ಮತ್ತು ವೆಜಿಟೆಬಲ್ಸ್​ ಪ್ರೈ.ಲಿ.ನ ನಿರ್ದೇಶಕ ರಾಜೀವ್​ ಅಗರ್ವಾಲ್, ಡೈನಾಮಿಕ್​ ರಿಯಾಲ್ಟಿ, ಡಿಬಿ ರಿಯಾಲ್ಟಿ ಲಿ. ಮತ್ತು ನಿಹಾರ್​ ಕನ್ಸ್​ಸ್ಟ್ರಕ್ಷನ್​ ಪ್ರೈ. ಲಿ. ಕಂಪನಿಗೆ ತಲಾ 3000 ಗಿಡಗಳಂತೆ ಒಟ್ಟು 15 ಸಾವಿರ ಗಿಡಗಳನ್ನು ನೆಡುವಂತೆ ನ್ಯಾಯಾಲಯ ಆದೇಶ ನೀಡಿದೆ.

ಅಲ್ಲದೇ ಮೇಲ್ಮನವಿ ಅರ್ಜಿಗೆ ಪ್ರತಿಕ್ರಿಯೆ ನೀಡಲು ಅಂತಿಮ ಅವಕಾಶ ನೀಡಿದೆ. ದಕ್ಷಿಣ ದೆಹಲಿ ಭಾಗದಲ್ಲಿ ಗಿಡ ನೆಡಲು ಫೆಬ್ರವರಿ 15ರಂದು ಸಂಬಂಧಪಟ್ಟ ಅರಣ್ಯ ಅಧಿಕಾರಿಯನ್ನು ಭೇಟಿಯಾಗುವಂತೆ ಸೂಚಿಸಲಾಗಿದೆ.

2ಜಿ ಹಗರಣದಲ್ಲಿ ಮಾಜಿ ಟಿಲಿಕಾಂ ಸಚಿವ ಎ ರಾಜಾ ಮತ್ತು ಡಿಎಂಕೆ ಸಂಸದೆ ಕನಿಮೋಳಿ ಅವರೊಂದಿಗೆ ಈ ಇಬ್ಬರು ವ್ಯಕ್ತಿಗಳು ಮತ್ತು ಮೂರು ಕಂಪನಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು. ಹಗರಣದಲ್ಲಿ 17 ಆರೋಪಿಗಳನ್ನು ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಮಾರ್ಚ್​ 2018ರಲ್ಲಿ ದೆಹಲಿ ಹೈಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.

2G case, Delhi high court,ED

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ