ಹೊಸ ಸರ್ಕಾರ ರಚನೆಯಾಗುವವರೆಗೂ ರಾಮ ಮಂದಿರ ಕುರಿತ ಹೋರಾಟ ನಿಲ್ಲಿಸಲು ನಿರ್ಧಾರ : ಮೋಹನ್ ಭಾಗವತ್

ಡೆಹ್ರಾಡೂನ್​: ಲೋಕಸಭೆ ಚುನಾವಣೆ ನಂತರ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣದ ಹೋರಾಟ ಮುಂದುವರಿಸಲಾಗುವುದು ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಡೆಹ್ರಾಡೂನ್​ನ ಆರ್​ಎಸ್​ಎಸ್​ ಕಚೇರಿಯಲ್ಲಿ ಆಂತರಿಕ ಸಭೆ ನಡೆಸಿದ ಭಾಗವತ್, ಈ ವಿಷಯ ತಿಳಿಸಿದ್ದು, ಚುನಾವಣೆ ನಂತರ ಹೊಸ ಸರ್ಕಾರ ರಚನೆಯಾದ ಬಳಿಕ ರಾಮ ಮಂದಿರ ನಿರ್ಮಾಣ ಕುರಿತು ಹೋರಾಟ ಮುಂದುವರೆಸಲಾಗುವುದು. ಅಲ್ಲಿಯವರೆಗೆ ಈ ವಿಷಯವಾಗಿ ಹೋರಾಟವನ್ನು ನಿಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮ ದೇಗುಲ ನಿರ್ಮಾಣ, ಧರ್ಮ ಆಧಾರಿತ ತಾರತಮ್ಯದಿಂದ ಹಿಡಿದು ಜಾತಿಯಾಧಾರಿತ ಮೀಸಲಾತಿವರೆಗೆ ಅರ್ಧ ಕುಂಭಮೇಳದಲ್ಲಿ ಆಯೋಜನೆಗೊಂಡಿದ್ದ ಧರ್ಮ ಸಂಸತ್​ನಲ್ಲಿ ತೆಗೆದುಕೊಳ್ಳಲಾದ ನಿಲುವಿಗೆ ತಾವು ಬದ್ಧರಾಗಿರುವುದಾಗಿ ಸ್ಪಷ್ಟಪಡಿಸಿದರು.

ಕೆಲದಿನಗಳ ಹಿಂದೆ ವಿಶ್ವ ಹಿಂದು ಪರಿಷತ್​ ಕೂಡ ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣದ ವಿಷಯವನ್ನು ಲೋಕಸಭೆ ಚುನಾವಣೆ ಮುಗಿಯುವವರೆಗೆ ಅಂದರೆ ಅಂದಾಜು ನಾಲ್ಕು ತಿಂಗಳವರೆಗೆ ಮುಂದೂಡುವುದಾಗಿ ಘೋಷಿಸಿತ್ತು. ಈಗ ಆರ್ ಎಸ್ ಎಸ್ ಕೂಡ ಇದೇ ನಿರ್ಧಾರಕ್ಕೆ ಬಂದಿದೆ.

After VHP, RSS puts off temple stir till Lok Sabha polls end

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ