ಛತ್ತೀಸ್ ಗಢ: ಭದ್ರತಾ ಪಡೆಗಳ ಎನ್ ಕೌಂಟರ್ ಗೆ 10 ನಕ್ಸಲ ಬಲಿ

ರಾಯ್ಪುರ​: ಛತ್ತೀಸ್​ಗಡದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆ ನಡೆಸಿದ ಎನ್​ಕೌಂಟರ್​ ನಲ್ಲಿ 10 ನಕ್ಸಲರನ್ನು ಹೊಡೆದುರುಳಿಸಲಾಗಿದೆ.

ಬೆಳಗ್ಗೆ ಸುಮಾರು 11 ಗಂಟೆಗೆ ಭೈರಾಪುರ ಪೊಲೀಸ್​ ಠಾಣೆಯ ಸಮೀಪದ ಅರಣ್ಯದಲ್ಲಿ ವಿಶೇಷ ದಳ ಹಾಗೂ ಜಿಲ್ಲಾ ರಿಸರ್ವ್​ ಗಾರ್ಡ್​ ಜಂಟಿಯಾಗಿ ಕಾರ್ಯಾಚರಣೆ ನಡೆಸಿ 10 ಮಂದಿ ನಕ್ಸಲರನ್ನು ಹತ್ಯೆಗೈದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಕ್ಸಲರ ಮೃತದೇಹಗಳೊಂದಿಗೆ 11 ಶಸ್ತ್ರಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆ ಭಾಗದಲ್ಲಿ ಇನ್ನೂ ನಕ್ಸಲರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಅಲ್ಲದೆ ಮೃತ ನಕ್ಸಲರ ಗುರುತು ಪತ್ತೆ ಕಾರ್ಯ ನಡೆದಿದೆ ಎಂದು ಬಿಜಾಪುರ ಎಸ್ ಪಿ ಮೋಹಿತ್ ಗಾರ್ಗ್ ತಿಳಿಸಿದ್ದಾರೆ.

10 Suspected Naxals Killed in Encounter in Chhattisgarh

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ