ಟಿಟಿವಿ ದಿನಕರನ್‌ ಪಕ್ಷಕ್ಕೆ ಪ್ರೆಶರ್‌ ಕುಕ್ಕರ್‌ ಚಿಹ್ನೆ ನೀಡಲು ಸುಪ್ರೀಂ ನಕಾರ

ಚೆನ್ನೈ: ಟಿಟಿವಿ ದಿನಕರನ್‌ ನೇತೃತ್ವದ ನೂತನ ‘ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ'(ಎಎಂಎಂಕೆ) ಪಕ್ಷಕ್ಕೆ ಪ್ರೆಶರ್‌ ಕುಕ್ಕರ್‌ ಚಿಹ್ನೆಯನ್ನು ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಕಳೆದ ವರ್ಷ ಮಾ. 9ರಂದು ದೆಹಲಿ ಹೈಕೋರ್ಟ್‌ ಧಿನಕರನ್‌ ಬಣದ ಎಐಎಡಿಎಂಕೆ(ಅಮ್ಮ) ಪಕ್ಷಕ್ಕೆ ಪ್ರೆಷರ್‌ ಕುಕ್ಕರ್‌ನ್ನು ಚಿಹ್ನೆಯಾಗಿ ನೀಡುವಂತೆ ಚುನಾವಣೆ ಆಯೋಗಕ್ಕೆ ಆದೇಶಿಸಿತ್ತು.

ನ್ಯಾಯಾಧೀಶ ಎ ಎಂ ಖಾನ್ವಿಲ್ಕರ್‌ ಮತ್ತು ಅಜಯ್‌ ರಸ್ತೋಗಿ ಅವರನ್ನೊಳಗೊಂಡ ಪೀಠ, ಚಿಹ್ನೆ ಹಂಚಿಕೆ ಸಂಬಂಧ ಬಾಕಿ ಉಳಿದಿರುವ ಪ್ರಕರಣವನ್ನು ಮುಂದಿನ ನಾಲ್ಕು ವಾರಗಳಲ್ಲಿ ಹೈಕೋರ್ಟ್‌ ವಿಲೇವಾರಿ ಮಾಡದೇ ಹೋದರೆ ಮಾ. 9, 2018ರ ಆದೇಶದನ್ವಯ ಚುನಾವಣೆ ಆಯೋಗವೇ ಮುಂದುವರಿಯಬಹುದು ಎಂದು ಹೇಳಿದೆ.

ತಮಿಳುನಾಡಿನಲ್ಲಿ ಸದ್ಯ ಖಾಲಿ ಇರುವ ಸ್ಥಾನಗಳಿಗೆ ನಾಲ್ಕು ವಾರಗಳಲ್ಲಿ ಚುನಾವಣೆಯನ್ನು ಘೋಷಿಸಿದರೆ ಇನ್ನೊಂದು ವಾರದಲ್ಲಿ ಟಿಟಿವಿ ದಿನಕರನ್‌ ಪಕ್ಷಕ್ಕೆ ಹೊಸ ಚಿಹ್ನೆಯನ್ನು ಹೈಕೋರ್ಟ್‌ ಆದೇಶದ ಪ್ರಕಾರ ಚುನಾವಣೆ ಆಯೋಗ ನೀಡಬೇಕು ಎಂದಿದೆ.

ತಮಿಳುನಾಡು ಮುಖ್ಯಮಂತ್ರಿ ಇ ಕೆ ಪಳನಿಸ್ವಾಮಿ ಬಣವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಬಳಿಕ ದಿನಕರನ್ ಗುಂಪಿನ ಪಕ್ಷದ ಚಿಹ್ನೆಯಾಗಿ ಪ್ರೆಷರ್ ಕುಕ್ಕರ್ ನೀಡುವಂತೆ ದೆಹಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಅಮಾನತು ಮಾಡಿತ್ತು.

ಪಳನಿಸ್ವಾಮಿ ನೇತೃತ್ವದ ಗುಂಪಿಗೆ ಎರಡು ಎಲೆಗಳ ಚಿಹ್ನೆಯನ್ನು ನೀಡಿ ನವೆಂಬರ್ 23, 2017 ರಂದು ಚುನಾವಣೆ ಆಯೋಗ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಧಿನಕರನ್‌ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.
Supreme Court refuses cooker symbol to TTV Dinakaran

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ