ಈ ಬಾರಿ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡುವುದಿಲ್ಲ: ಶಾಸಕ ಉಮೇಶ್ ಕತ್ತಿ

ಚಿಕ್ಕೋಡಿ, ಫೆ.5- ಪಕ್ಷೇತರರು ಸೇರಿ ನಮ್ಮ ಬಿಜೆಪಿ ಪಕ್ಷದಲ್ಲಿ ಬಳಿ 106 ಶಾಸಕರಿದ್ದಾರೆ. 8 ಜನ ರಾಜೀನಾಮೆ ಕೊಟ್ಟರೆ ಹೊಸ ಸರ್ಕಾರ ರಚನೆಯಾಗುವುದು ಕಡಾ ಖಂಡಿತ ಎಂದು ಶಾಸಕ ಉಮೇಶ್ ಕತ್ತಿ ಭವಿಷ್ಯ ನುಡಿದಿದ್ದಾರೆ.

ಹುಕ್ಕೇರಿ ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯದ ರಾಜಕೀಯ ವಾತಾವರಣ ನೋಡಿದರೆ ಸರ್ಕಾರ ಉರುಳುವುದು ಖಚಿತ.

ಶೀಘ್ರದಲ್ಲೇ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ರಚನೆಯಾಗಲಿದೆ. ಸಿಎಂ ಆಗಿ ಯಡಿಯೂರಪ್ಪ ಬಜೆಟ್ ಮಂಡಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎಚ್.ಡಿ. ಕುಮಾರಸ್ವಾಮಿ ಈ ಬಾರಿಯ ಬಜೆಟï ಮಂಡನೆ ಮಾಡುವುದಿಲ್ಲ ಎನ್ನುವುದು ನೂರಕ್ಕೆ ನೂರರಷ್ಟು ಖಚಿತ.ಸಿದ್ದರಾಮಯ್ಯನವರ ಅನುಯಾಯಿ ಶಾಸಕರೂ ಸೇರಿದಂತೆ ಹಲವರು ಕಣ್ತಪ್ಪಿಸಿಕೊಂಡು ತಿರುಗುತ್ತಿದ್ದಾರೆ.ಬಿಜೆಪಿಯ ಶಾಸಕರು ರೆಸಾರ್ಟ್‍ಗೆ ಹೋಗುತ್ತಿಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ