ಬೆಂಗಳೂರು,ಫೆ.3- ಶಿಕ್ಷಕರ ಆಯ್ಕೆಗಾಗಿ ನಡೆಯುವ ಶಿಕ್ಷಕರ ಸಾಮಾನ್ಯ ಪ್ರವೇಶ ಪರೀಕ್ಷೆ (ಟಿಇಟಿ) ಕೆಲವೆಡೆ ಗೊಂದಲದ ಗೂಡಾಗಿತ್ತು.
ಶಿವಮೊಗ್ಗ, ಬೆಂಗಳೂರು, ರಾಮನಗರ ಸೇರಿದಂತೆ ಹಲವೆಡೆ ಅಭ್ಯರ್ಥಿಗಳಿಗೆ ಪರೀಕ್ಷಾ ಕೊಠಡಿಗಳು ಸಿಗದೆ ಆರಂಭದಲ್ಲಿ ಪರದಾಡಿದರು.ಕೆಲವೆಡೆ ಅರ್ಧ ಗಂಟೆಗೂ ಹೆಚ್ಚು ಕಾಲ ಪರೀಕ್ಷೆ ತಡವಾಗಿ ಪ್ರಾರಂಭವಾಯಿತು.
ಶಿಕ್ಷಕರ ಆಯ್ಕೆಗಾಗಿ ನಡೆಸುವ ಟಿಇಟಿ ಪರೀಕ್ಷೆಗಾಗಿ ರಾಜ್ಯದ ಹಲವೆಡೆ ಹಲವು ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು.
ಶಿವಮೊಗ್ಗದ ಹಲವೆಡೆ ಪರೀಕ್ಷಾ ಕೊಠಡಿಗಳು ಸಿಗದೆ ಪರದಾಡಿದರು. ಬೆಳಗ್ಗೆ 10 ಗಂಟೆಗೆ ಪರೀಕ್ಷೆ ಪ್ರಾರಂಭವಾಯಿತಾದರೂ 10.30ರಾದರೂ ಕೆಲವು ಅಭ್ಯರ್ಥಿಗಳಿಗೆ ತಮ್ಮ ಪರೀಕ್ಷೆಯ ಕೊಠಡಿಗಳು ಸಿಕ್ಕಿರಲಿಲ್ಲ.
ಪ್ರವೇಶ ಪತ್ರಗಳಿದ್ದರೂ ಪರೀಕ್ಷಾ ಕೇಂದ್ರಗಳಲ್ಲಿ ಗೊಂದಲ ಉಂಟಾಗಿತ್ತು. ಶಿವಮೊಗ್ಗದ ಎನ್ಇಎಸ್ ಕಾಲೇಜಿನಲ್ಲಿ ಉಂಟಾದ ಈ ಗೊಂದಲದಿಂದ ಪರೀಕ್ಷಾರ್ಥಿಗಳು ತೀವ್ರ ಆತಂಕಕ್ಕೊಳಗಾಗಿದ್ದರು.
ಕೂಡಲೇ ಜಿಲ್ಲಾಧಿಕಾರಿ ಕೆ.ಎಸ್.ದಯಾನಂದ್ ಸ್ಥಳಕ್ಕೆ ಆಗಮಿಸಿ ಗೊಂದಲ ಪರಿಹರಿಸಿ ಪರೀಕ್ಷೆಗೆ ಹೆಚ್ಚಿನ ಸಮಯ ಅವಕಾಶ ನೀಡುವುದಾಗಿ ನೀಡಿದರು.
ಇನ್ನು ಬೆಂಗಳೂರು, ರಾಮನಗರದಲ್ಲೂ ಇಂಥದೇ ಗೊಂದಲ ಉಂಟಾಗಿ ಪರೀಕ್ಷಾರ್ಥಿಗಳು ಪರದಾಡಿದರು.ಪರೀಕ್ಷಾ ಕೋಠಡಿ ಮೇಲ್ವಿಚಾರಕ ಮೇಲೆ ಆಕ್ರೋಶ ವ್ಯಕ್ತಪಡಿಸಿರುವುದು ಕಂಡುಬಂದಿದೆ.