ರೋಹಿತ್, ಧವನ್ಗೆ ಕಾಡ್ತಿದೆಯಾ left  Arm  Pacer ಭಯ ?

ಡ್ಯಾಶಿಂಗ್ ಓಪನರ್ಸ್ಗಳನ್ನ ಮತ್ತೆ ಕಾಡಿದ ಕಿವೀಸ್ ವೇಗಿ ಟೀಂ ಇಂಡಿಯಾಕ್ಕೆ ಟeಜಿಣ left  Arm  Pacers ಗಳ ಭಯ ಮತ್ತೆ ಶುರುವಾಗಿದೆಯಾ ? ಇಂಥದೊಂದು ಪ್ರಶ್ನೆ ಮೊನ್ನೆ ಕಿವೀಸ್ ವಿರುದ್ಧದ ನಾಲ್ಕನೆ ಏಕದಿನ ಪಂದ್ಯದಲ್ಲಿ ಹಿಟ್ಮ್ಯಾನ್ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ decent ಓಪನಿಂಗ್ ಕೊಡಲಿಲ್ಲ.
ಮೊನ್ನೆ ಹ್ಯಾಮಿಲ್ಟನ್ ಅಂಗಳದಲ್ಲಿ ನಡೆದ ನಾಲ್ಕನೆ ಏಕದಿನ ಪಂದ್ಯದಲ್ಲಿ ಓಪನರ್ಗಳಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಬ್ಯಾಕ್ ಟು ಬ್ಯಾಕ್ ಕಿವೀಸ್ ನ ಲೆಫ್ಟ್ ಆರ್ಮ್ ಪೇಸರ್ ಟ್ರಂಟ್ ಬೌಲ್ಟ್ಗೆ ವಿಕೆಟ್ ಒಪ್ಪಿಸಿ ಪೆವಲಿಯನ್ ಪರೇಡ್ ನಡೆಸಿದ್ರು.

13 ರನ್ ಗಳಿಸಿದ್ದ ಶಿಖರ್ ಧವನ್ ಆರನೇ ಓವರ್ನಲ್ಲಿ ಟ್ರೆಂಟ್ ಬೌಲ್ಟ್ ಎಸೆದ ಇನ್ಸ್ವಿಂಗ್ಗೆ ಬಲಿಯಾದ್ರು. ಇನ್ನು ಬೌಲ್ಟ್ ಎಸೆತದಲ್ಲಿ ರನ್ ಗಳಿಸಲು ಪರದಾಡುತ್ತಿದ್ದ ಹಿಟ್ಮ್ಯಾನ್ ರೋಹಿತ್ ಡೆಡ್ಲಿ ಸ್ವಿಂಗ್ಗೆ ಕಾಟ್ ಅಂಡ್ ಬೌಲ್ಡ್ ಆದ್ರು. ಇದರೊಂದಿಗೆ ಈ ಇಬ್ಬರು ಬ್ಯಾಟ್ಸ್ಮನ್ಗಳು ಲೆಫ್ಟ್ ಆರ್ಮ್ ಪೇಸರ್ಸ್ಗೆ ಬಲಿಯಾದ್ರು.

ರೋಹಿತ್, ಧವನ್ಗೆ ಕಾಡ್ತಿದೆಯಾ ಲೆಫ್ಟ್ ಆರ್ಮ್ ಪೇಸರ್ಸ್ ಭಯ ?
ಮೊನ್ನೆ ವೇಗಿ ಟ್ರೆಂಟ್ ಬೌಲ್ಟ್ಗೆ ರೋಹಿತ್ , ಧವನ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದಾಗ ಕಾಡಿದ್ದು ಒಂದೇ ಪ್ರಶ್ನೆ . ಅದು ಧವನ್ ಮತ್ತು ರೋಹಿತ್ಗೆ ಮತ್ತೆ ಲೆಫ್ಟ್ ಆರ್ಮ್ ಪೇಸರ್ಸ್ ಭಯ ಕಾಡ್ತಿದೆಯಾ? ವರ್ಷದ ಹಿಂದೆ ಇದೇ ರೋಹಿತ್, ಧವನ್ ಇದೇ ಸಮಸ್ಯೆಯಂದ ಬಳಲಿದ್ರು.

ತವರಿನಲ್ಲಿ ಬೌಲ್ಟ್ಗೆ ಬಲಿಯಾಗಿದ್ದ ರೋಹಿತ್, ಧವನ್
ಎರಡು ವರ್ಷದ ಹಿಂದೆ ಇದೇ ಕಿವೀಸ್ ವಿರುದ್ಧ ತವರಿನಲ್ಲಿ ನಡೆದ ಸೀಮಿತ ಓವರ್ಗಳ ಸರಣಿಯಲ್ಲಿ ಇದೇ ಟ್ರೆಂಟ್ ಬೌಲ್ಟ್ಗೆ ಏಕದಿನ ಮತ್ತು ಟಿ20 ಸರಣಿಗಳಲ್ಲಿ ವಿಕೆಟ್ ಒಪ್ಪಿಸಿ ಹೊರ ನಡೆದಿದ್ರು. ಇನ್ನು ತಂಡದ ಮತ್ತೋರ್ವ ಓಪನರ್ ಶಿಖರ್ ಧವನ್ ಕೂಡ ಟ್ರೆಂಟ್ ಬೌಲ್ಟ್ ಗೆ ಏಕದಿನ ,ಮತ್ತು ಟಿ20ಯಲ್ಲಿ ಬಲಿಯಾಗಿದ್ರು.

ಬೆರೆನ್ಡ್ರೋಫ್ಗೆ ಬೆದರಿದ್ದ ಟೀಂ ಇಂಡಿಯಾ ಓಪನರ್ಸ್
ಕಿವೀಸ್ಗೂ ಮುನ್ನ ತವರನಲ್ಲೆ ನಡೆದಿದ್ದ ಆಸೀಸ್ ವಿರುದ್ಧ ನಡೆದ ಟಿ20 ಸರಣಿಯಲ್ಲಿ ರೋಹಿತ್, ಧವನ್ ಆಸೀಸ್ ನ ಐeಜಿಣ left  Arm  Pacers ಜಾಸನ್ ಬೆರೆನ್ಡ್ರಾಫ್ಗೆ ವಿಕೆಟ್ ಒಪ್ಪಿಸಿದ್ರು. ಇದು ಆ ಸಂದರ್ಭದಲ್ಲಿ ತಂಡದ ಮ್ಯಾನೇಜ್ಮೆಂಟ್ಗೆ ದೊಡ್ಡ ತಲೆ ನೋವಾಗಿತ್ತು.

ಲೆಫ್ಟ್ ಆರ್ಮ್ ಪೇಸರ್ಸ್ ಭಯಕ್ಕೆ ಪರಿಹಾರ ಹುಡುಕಿದ್ದ ಬಿಸಿಸಿಐ
ಹೀಗೆ ಟೀಂ ಇಂಡಿಯಾ ಬ್ಯಾಟ್ಸ್ಮನ್ ಗಳು ಬ್ಯಾಕ್ ಟು ಬ್ಯಾಕ್ ಲೆಫ್ಟ್ ಆರ್ಮ್ ಪೇಸರ್ಸ್ಗಳಿಗೆ ಬಲಿಯಾಗುತ್ತಿರೋದಕ್ಕೆ ತಡೆಯಲು ಪರಿಹಾರವೊಮದನ್ನ ಕಂಡುಕೊಂಡಿತ್ತು. ಲಂಕಾದ ಬೌಲಿಂಗ್ ಕೋಚ್ ನುವಾನ್ ಸೆನೆವಿರತ್ನೆ ಅವರನ್ನ ಲೆಫ್ಟ್ ಆರ್ಮ್ ಪೇಸರ್ಸ್ಗಳನ್ನ ಎದುರಿಸಲು ಬಳಸಿಕೊಂಡಿತ್ತು. ಗಾಡ್ ಆಫ್ ಕ್ರಿಕೆಟ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರನ್ನ ನೆಟ್ಸ್ನಲ್ಲಿ ಚೆನ್ನಾಗಿ ಬಳಿಸಿಕೊಂಡಿತ್ತು.

ಏಷ್ಯಾಕಪ್ನಲ್ಲಿ ಪಾಕ್ ಉಡೀಸ್ ಮಾಡಿದ್ದ ಧವನ್, ರೋಹಿತ್
ಲೆಫ್ಟ್ ಆರ್ಮ್ ಪೇಸರ್ಸ್ಗಳೆದುರು ಗಿರಿಗಿಟ್ಲೆ ಹೊಡೆಯುತ್ತಿದ್ದ ರೋಹಿತ್ ಮತ್ತು ಧವನ್ ಮ್ತತೆ ಕಮ್ಬ್ಯಾಕ್ ಮಾಡಿದ್ರು. ಪಾಕ್ನ ಎಫ್ಟ್ ಆರ್ಮ್ ಪೇಸರ್ಸ್ಗಳಾದ ಮೊಹ್ಮದ್ ಅಮೀರ್, ಶಾಹಿನ್ ಅಫ್ರಿದಿ ಮತ್ತು ಮೊಹ್ಮದ್ ನವಾಜ್ ಅವರ ದಾಳಿಯನ್ನ ಸಮರ್ಥವಾಗಿ ಎದುರಿಸಿದ್ರು. ಈ ಬೊಂಬಾಟ್ ಪರ್ಫಾಮನ್ಸ್ನೊಂದಿಗೆ ರೋಹಿತ್ -ಧವನ್ ಇಡೀ ಟೂರ್ನಿಯಲ್ಲಿ ರನ್ ಮಳೆಯನ್ನೆ ಸುರಿಸಿ ಏಷ್ಯಾಕಪ್ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಜೊತೆಗೆ ಲೆಫ್ಟ್ ಆರ್ಮ್ ಪೇಸರ್ಸ್ ಸಮಸ್ಯೆಯಿಂದ ಹೊರ ಬಂದಿದ್ರು.
ಒಟ್ಟಾರೆ ರೋಹಿತ್ ಮತ್ತು ಧವನ್ಗೆ ಇದೀಗ ಮತ್ತೆ left  Arm  Pacers ಗಳ ಭಯ ಶುರುವಾಗಿದ್ದು ವಿಶ್ವಕಪ್ ವೇಳೆಗೆ ಈ ಸಮಸ್ಯೆಯಿಂದ ಹೊರಬರಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ