ಬಿಸಿಸಿಐಗೆ ತಲೆ ನೋವಾದ ಆಟಗಾರರ ಫ್ಯಾಮಿಲಿ ಟ್ರಿಪ್

ಟೀಂ ಇಂಡಿಯಾ ಹೋದಲೆಲ್ಲ ಬ್ಯಾಕ್ ಟು ಬ್ಯಾಕ್ ಸರಣಿಗಳನ್ನ ಗೆದ್ದು ಬೀಗುತ್ತಿದೆ. ಆಟಗಾರರು ಕೂಡ ಫುಲ್ ಖುಷಿಯಲ್ಲಿದ್ದಾರೆ. ಸರಣಿ ಗೆದ್ದ ಖುಷಿಯಲ್ಲಿ ಕೆಲವು ಆಟಗಾರರು ತಮ್ಮ ಕುಟುಂಬ ಜೊತೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಕಿವೀಸ್ ನಾಡಲ್ಲಿ ಎಂಜಾಯ್ ಮಾಡುತ್ತಿದೆ ವಿರೂಷ್ಕಾ ಜೋಡಿ
ಸದ್ಯ ಐತಿಹಾಸಿಕ ಸರಣಿ ಗೆದ್ದು ಕೊಟ್ಟ ಕ್ಯಾಪ್ಟನ್ ಕೊಹ್ಲಿ ಪತ್ನ ಅನುಷ್ಕಾ ಶರ್ಮಾ ಜೊತೆ ಬಿಂದಾಸ್ ಆಗಿ ಎಂಜಾಯ್ ಮಾಡುತ್ತಿದ್ದಾರೆ. ಆಸಿಸ್ ನಾಡಲ್ಲಿ ನ್ಯೂ ಇಯರ್, ವೆಡ್ಡಿಂಗ್ ಆ್ಯನಿವರ್ಸರಿ ಮತ್ತು ಆಸ್ಟ್ರೇಲಿಯಾ ಓಪನ್ ಟೆನ್ನಿಸ್ ಟೂರ್ನಿ ವೀಕ್ಷಿಸಿ ರಿಲ್ಯಾಕ್ಸ್ ಆಗಿತ್ತು. ಇದಿಗ ಕಿವೀಸ್ ನಾಡಲ್ಲೂ ಕೊನೆಯ ಎರಡು ಪಂದ್ಯಗಳಿಂದ ವಿಶ್ರಾಂತಿ ಪಡೆದು ಪತ್ನಿ ಅನುಷ್ಕಾ ಜೊತೆ ಸುತ್ತಾಡುತ್ತಿದ್ದಾರೆ.

ಇನ್ನು ಕಿವೀಸ್ ನಾಡಲ್ಲಿ ಎಂಜಾಯ್ ಮಾಡುತ್ತಿರುವ ಮತ್ತೊಂದು ಫ್ಯಾಮಿಲಿ ಅಂದ್ರೆ ಅದು ತಂಡದ ಡ್ಯಾಶಿಂಗ್ ಓಪನರ್ ಶಿಖರ್ ಧವನ್ ಫ್ಯಾಮಿಲಿ. ಕುಟುಂಬ ಸಮೇತರಾಗಿ ಕಿವೀಸ್ ನಾಡಲ್ಲಿ ಧವನ್ ಮಕ್ಕಳೊಂದಿಗೆ ತುಂಟಾಟ ಆಡುತ್ತಾ ಕಾಲ ಕಳೆಯುತ್ತಿದ್ದಾರೆ.

ಬಿಸಿಸಿಐಗೆ ತಲೆ ನೋವಾದ ಫ್ಯಾಮಿಲಿ ಟ್ರಿಪ್
ಈ ಬಾರಿಯ ಆಸಿಸ್, ಕಿವೀಸ್ ಪ್ರವಾಸಕ್ಕೆ ಆಟಗಾರರು ಪತ್ನಿ ಮಕ್ಕಳು ಮತ್ತು ಕುಟುಂಬ ಸಮೇತರಾಗಿ ಪ್ರಯಾಣ ಬೆಳೆಸಿದ್ದಾರೆ . ಇದರ ಬಗ್ಗೆ ಸ್ವತಃ ಬಿಸಿಸಿಐ ತಲೆಕೆಡಿಸಿಕೊಂಡಿದೆ. ಸಾಮಾನ್ಯವಾಗಿ ವಿದೇಶಿ ಸರಣಿಗಳಲ್ಲಿ ಟೀಮ್ ಇಂಡಿಯಾ ಆಟಗಾರರ ಜೊತೆ, ಅವರ ಕುಟುಂಬ ಸಹ ಪ್ರಯಾಣ ಮಾಡುತ್ತದೆ. ಇದ್ರಿಂದ ಬಿಗ್ಬಾಸ್ಗಳಿಗೆ ಬಸ್ ಅರೇಂಜ್ಮೆಂಟ್, ಹೋಟೆಲ್ ಬುಕ್ಕಿಂಕ್ಸ್, ಲಾಜಿಸ್ಟಿಕ್ಸ್, ಮ್ಯಾಚ್ ಟಿಕೆಟ್ಸ್.. ಹೀಗೆ ಅವರ ಆಗು-ಹೋಗುವುಗಳನ್ನ ನೋಡಿಕೊಳ್ಳೋದೇ, ದೊಡ್ಡ ಸವಾಲಾಗಿದೆ.

ಕಳೆದ ತಿಂಗಳು ಆಸಿಸ್ ನಾಡಲ್ಲಿ ಟೀಮ್ ಇಂಡಿಯಾ ಜೊತೆ, 2 ಬಸ್ಗಳಲ್ಲಿ 40 ಮಂದಿ ಪ್ರಯಾಣ ಬೆಳೆಸಿ, ಸಾಕಷ್ಟು ಗೊಂದಲ ಅನುಭವಿಸಿತು. ಇದೀಗ ನ್ಯೂಜಿಲೆಂಡ್ ಪ್ರವಾಸದಲ್ಲೂ ಬಿಗ್ಬಾಸ್ಗಳು, ಇದೇ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ಇದ್ಕಕೊಂದು ಫುಲ್ ಸ್ಟಾಪ್ ಹಾಕಲು, ಬಿಸಿಸಿಐ ಬಾಸ್ಗಳು ಪ್ಲಾನ್ ಮಾಡ್ತಿದ್ದಾರೆ.

ಆಂಗ್ಲರ ವಿರುದ್ಧದ ಸರಣಿಯಲ್ಲಿ ಸಮಸ್ಯೆಯಾಗಿತ್ತು ಫ್ಯಾಮಿಲಿ ಟ್ರಿಪ್
ಕಳೆದ ವರ್ಷ ಇಂಗ್ಲೆಂಡ್ ಪ್ರವಾಸಕ್ಕೆ ಹೋದಾಗಲೂ ಆಟಗಾರರೊಂದಿಗೆ ಕುಟುಂಬ ಬಂದಿದ್ದು ಸಮಸ್ಯೆಯಾಗಿತ್ತು. ಸರಣಿಗಳನ್ನ ಸೋತಾಗ ಆಟಗಾರರು ಕುಟುಂಬ ಜೊತೆ ಬಂದಿದ್ದೆ ಸರಣಿ ಸೋಲಿಗೆ ಕಾರಣ ಎಂದು ಆರೋಪಿಸಲಾಗಿತ್ತು. ಆಗಲೇ ಬಿಸಿಸಿಐ ಇನ್ನು ಮುಂದೆ ಆಟಗಾರರು ತಮ್ಮ ಕುಟುಂಬದೊಂದಿಗೆ ಬರಬಾರದೆಂಬ ಕಠಿಣ ನಿಧಾ್ರವನ್ನ ಕೈಗೊಂಡಿದ್ರು.
ನಂತರ ಆಟಗಾರರು ಇದರ ಬಗ್ಗೆ ಅಸಮಾಧಾನ ಹೊರ ಹಾಕಿದಾಗ ಬಿಸಿಸಿಐ ನಿಯಮಗಳನ್ನ ಸಡಿಲಿಸಿ ಕೇವಲ 10 ದಿನಗಳ ಕಾಲ ಸಮಯ ಕಳೆಯಲು ಅವಕಾಶ ನೀಡಿತ್ತು. ಇದರ ಹೊರತಾಗಿಯೂ ಬಿಸಿಸಿಐಗೆ ಆಟಗಾರರ ಕುಟುಂಬ ಖರ್ಚು ವೆಚ್ಚ ತಲೆನೋವಾಗಿದೆ.

ಒಟ್ಟಾರೆ ವಿಶ್ವಕಪ್ ಸಮಿಪಿಸುತ್ತಿರುವುದರಿಂದ ಆಟಗಾರರು ಆಟದ ಕಡೆ ಗಮನ ಕೊಡಬೇಕಿದ್ದು ಇದರ ಬಗ್ಗೆ ಬಿಸಿಸಿಐ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ