ವಿಶ್ವಕಪ್ ಮೇಲೆ ಕರಿ ನೆರಳು ಚೆಲ್ಲಿದ 4ನೇ ಪಂದ್ಯ..!

ಆತಿಥೇಯ ನ್ಯೂಜಿಲೆಂಡ್ ವಿರುದ್ದ ನಡೆದ 4ನೇ ಏಕದಿನ ಪಂದ್ಯ ಟೀಮ್ ಇಂಡಿಯಾಗೆ ನಿದ್ದೆಗೇಡಿಸುವಂತೆ ಮಾಡಿದೆ. ಸತತ ಮೂರು ಪಂದ್ಯ ಗೆದ್ದ ವಿರಾಟ್ ಬಳಗ ಏಕಾಏಕಿ 4ನೇ ಪಂದ್ಯದಲ್ಲಿ ಮುಗ್ಗರಿಸುವ ಮೂಲಕ ಆತಂಕ ಸೃಷ್ಠಿ ಮನೆ ಮಾಡಿದೆ. ಮುಂಬರುವ ವಿಶ್ವಕಪ್ ಮೇಲೆ ಈ ಸೋಲು ಕರಿ ನೆರಳು ಚೆಲ್ಲಿದ್ದು, ಟೀಮ್ ಇಂಡಿಯಾ ವಿಶ್ವಕಪ್ ಇತಿಹಾಸದಲ್ಲಿ ಕಂಡರಿಯದ ಸೋಲು ಎದುರಾಗುವ ಭೀತಿ ಉಂಟಾಗಿದೆ.

ಕಳೆದ ವಿಶ್ವಕಪ್ನಿಂದ ಭರ್ಜರಿ ಫಾರ್ಮ್ನಲ್ಲಿದ್ದ ಟೀಮ್ ಇಂಡಿಯಾ ಇಂಗ್ಲೆಂಡ್ ಮತ್ತು ಸೌತ್ ಅಫ್ರಿಕಾದಲ್ಲಿ ಮುಗ್ಗರಿಸಿತ್ತು, ಆದ್ರೆ ಇದೇ ಮೊದಲ ಬಾರಿ ವಿಶ್ವಕಪ್ ಹತ್ತಿರವಾಗುತ್ತಿರುವಾಗ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡಿದ್ದು, ನಾಯಕ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐಗೆ ತಲೆ ನೋವು ಉಂಟು ಮಾಡಿದೆ. ಹ್ಯಾಮಿಲ್ಟನ್ನಲ್ಲಿ ನಡೆದ ಪಂದ್ಯದ ರೀತಿ ಜೂನ್ ನಲ್ಲಿ ವಿಶ್ವಕಪ್ನಲ್ಲಿ ಮರುಕಳಿಸಿದ್ರೆ ಏನ್ ಕಥೆ ಅನ್ನೋ ಚರ್ಚೆ ಈಗಲೇ ಶುರುವಾಗಿದೆ. ವಿರಾಟ್ ಬಳಗ ವಿಶ್ವಕಪ್ನಲ್ಲಿ ಸೆಮಿಫೈನಲ್ಗೆ ಏರುತ್ತಾ ಅನ್ನೋ ಚರ್ಚೆಯನ್ನೂ ಹುಟ್ಟು ಹಾಕಿದೆ.

ವಿಶ್ವಕಪ್ ಮೇಲೆ ಕರಿ ನೆರಳು ಚೆಲ್ಲಿದ 4ನೇ ಪಂದ್ಯ..!
ಯೆಸ್. ಟೀಮ್ ಇಂಡಿಯಾ ಇತಿಹಾಸದ ಉದ್ದಕ್ಕೂ ನೋಡಿದ್ರೆ. ಪಾಕ್ ವಿರುದ್ದ ವಿಶ್ವಕಪ್ನಲ್ಲಿ ಭಾರತದ ಶರಣಾದ ಮಾತೆ ಇಲ್ಲ. ಆದ್ರೆ ಕಿವೀಸ್ ವಿರುದ್ಧದ 4ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಮಾಡಿಕೊಂಡ ಎಡವಟ್ಟು,ವಿಶ್ವಕಪ್ ಮುನ್ನವೇ ವಿರಾಟ್ ಬಳಗಕ್ಕೆ ಕರಿ ನೆರಳಾಗಿ ಕಾಡುತ್ತಿದೆ. ಪಾಕಿಸ್ತಾನದ ವಿರುದ್ದ ವಿಶ್ವಕಪ್ನಲ್ಲಿ ಭಾರತ ಸೋಲುವ ಭಯ ಎದುರಾಗಿದೆ.

ಇಂಗ್ಲೆಂಡ್ ನೆಲದಲ್ಲಿನ ಪಿಚ್ಗಳಿಗೆ ಹೋಲಿಸಿಕೊಂಡ್ರೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪಿಚ್ಗಳು ಟೀಮ್ ಇಂಡಿಯಾಗೆ ಉಪಕಾರಿಯಾಗಿವೆ. ಆಸಿಸ್ ವಿರುದ್ದ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಮತ್ತು ನ್ಯೂಜಿಲೆಂಡ್ ವಿರುದ್ಧ ನಡೆದ 4ನೇ ಪಂದ್ಯದಲ್ಲೂ ಭಾರತದ ಮುಗ್ಗರಿಸಿದ್ದನ್ನ ನೋಡಿದ್ರೆ ಭಯ ಹುಟ್ಟಿಸುವಂತಿದೆ. ಇದೇ ರೀತಿ ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಒಂದೇ ಒಂದು ಪಂದ್ಯದಲ್ಲಿ ಎಡವಿದ್ರೆ ಸಾಕು ವಿಶ್ವಕಪ್ ಟೂರ್ನಿಯಿಂದ ಹೊರಬೀಳೋದು ಸತ್ಯ..

ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಭಾರತ ಸೋಲಲು ಇದೆ ಕಾರಣ..!
ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ದ ಸೋಲಿಲ್ಲದ ಸರದಾರನಾಗಿರುವ ಭಾರತ ಈ ಬಾರಿ ಸೋಲಲು ಒಂದು ಕಾರಣ ಇದೆ. ಹ್ಯಾಮಿಲ್ಟನ್ ಮತ್ತು ವೆಲ್ಲಿಂಗ್ಟನ್ ಪಿಚ್ಗಳು ಸ್ವಿಂಗ್ ಪಿಚ್ಗಳಾದ್ರು, ಇಂಗ್ಲೆಂಡ್ ನೆಲದಷ್ಟು ಡೇಂಜರಸ್ ಅಲ್ಲ. ಇಂಗ್ಲೆಂಡ್ ನೆಲದಲ್ಲಿನ್ನ ಪಿಚ್ಗಳು ವಿಶ್ವದಲ್ಲಿಯೇ ಭಯನಾಕ ಡೇಂಜಸರ್ ಸ್ವಿಂಗ್ ಪಿಚ್ಗಳು. ಇಲ್ಲಿ ಒಮ್ಮೆ ಒಂದು ತಂಡ ಎಡವಿದ್ರೆ ಮುಗಿತು ಆ ಸರಣಿಯುದ್ಧಕ್ಕೂ ಸೋಲು ಪಕ್ಕಾ..
ಹೀಗಿರುವಾಗ ಟೀಮ್ ಇಂಡಿಯಾ ಲೀಗ್ ಹಂತದಲ್ಲಿ ಸೂಪರ್ ಆಟವಾಡಿದ್ರು. ಮ್ಯಾಂಚೆಸ್ಟರ್ನಲ್ಲಿ ನಡೆಯುವ ಪಾಕಿಸ್ತಾನದ ವಿರುದ್ದ ಪಂದ್ಯದಲ್ಲಿ ಮುಗ್ಗರಿಸುವ ಭಯ ಕಾಡ್ತಿದೆ. ಹೀಗಾಗಲೇ ಇದಕ್ಕೆ ಉದಾಹರಣೆ ಎಂಬಂತೆ ಚಾಂಪಿಯನ್ ಟ್ರೋಫಿಯಲ್ಲಿ ಮೊದಲ ಪಂದ್ಯ ಗೆದ್ದ ಭಾರತ ಕೊನೆಯ ಪಂದ್ಯದಲ್ಲಿ ಮುಗ್ಗರಿಸಿತ್ತು. ಇಲ್ಲಿ ಭಾರತದ ಸೋಲಿಗೆ ವರ್ಕೌಟ್ ಆಗಿದ್ದು ಇದೇ ಡೇಂಜರಸ್ ಸ್ವಿಂಗ್ ಬೌಲಿಂಗ್. ಇದು ಟೀಮ್ ಇಂಡಿಯಾ ಪಾಲಿಗೆ ಸಿಂಹ ಸ್ವಪ್ನಾವಾಗುವುದರಲ್ಲಿ ಎರಡು ಮಾತಿಲ್ಲ..

ಒಟ್ನಲ್ಲಿ ವಿರಾಟ್ ವಿಶ್ವಕಪ್ಗೆ ಬಹಳ ಟೈಮ್ ಇದ್ದು, ಇನ್ನಾದ್ರು ಎಚ್ಚೆತ್ತು ಆಟವಾಡುವುದು ಮುಖ್ಯ. ಸ್ವಿಂಗ್ ಮುಂದೆ ಟೀಮ್ ಇಂಡಿಯಾ ಇನ್ನಷ್ಟು ಪಕ್ವಾ ಆಗಬೇಕಿರುವುದು ನಿಜ..

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ