ರಾಬರ್ಟ್ ವಾದ್ರಾಗೆ ನಿರೀಕ್ಷಾಣಾ ಜಾಮೀನು ಮಂಜೂರು

ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ರಾಬರ್ಟ್​ ವಾದ್ರಾಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ವಾದ್ರಾ ಅರ್ಜಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ, ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಫೆ.11ವರೆಗೆ ವಾದ್ರಾ ಅವರನ್ನು ಬಂಧಿಸದಂತೆ ಸೂಚನೆ ನಿಡಿದೆ.

ರಾಬರ್ಟ್​ ವಾದ್ರಾ ಪರ ವಕೀಲ ಕೆಟಿಎಸ್​​​​ ತುಲಸಿ, ವಾದ್ರಾ ಅವರನ್ನು ಫೆಬ್ರವರಿ 6 ರಂದು ಇಡಿ ವಿಚಾರಣೆಗೆ ಹಾಜರುಪಡಿಸಲಾಗುವುದು ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಕೋರ್ಟ್​ ಅವರಿಗೆ ಫೆಬ್ರವರಿ 11ರವರೆಗೂ ಬಂಧಿಸದಂತೆ ತಿಳಿಸಿದೆ. 1 ಲಕ್ಷ ಬಾಂಡ್​ ನೀಡುವ ಜೊತೆಗೆ ಫೆ.6ರಂದು ಸಂಜೆ 4ಗಂಟೆ ಮೇಲೆ ತನಿಖೆಯಲ್ಲಿ ಭಾಗಿಯಾಗುವಂತೆ ತಿಳಿಸಿದೆ. ಇನ್ನು ವಾದ್ರಾ ಸಹಚರ ಮನೋಜ್​ ಅರೋರಾ ಅವರಿಗೂ ಫೆಬ್ರವರಿ 6ರ ವರೆಗೂ ಬಂಧಿಸದಂತೆ ಕೋರ್ಟಿನಿಂದ ರಕ್ಷಣೆ ಸಿಕ್ಕಿದೆ.

ಲಂಡನ್​ನಲ್ಲಿ ಆಸ್ತಿ ಖರೀದಿ ಮಾಡುವಾಗ ವಾದ್ರಾ ಸುಮಾರು 1.9 ಮಿಲಿಯನ್​ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಇಡಿ ತನಿಖೆಗೆ ಮುಂದಾಗಿತ್ತು. ನ್ಯಾಯಾಲಯದಲ್ಲಿ ವಾದ್ರಾ ಪರ ವಿಚಾರಣೆ ನಡೆಸಿದ ಹಿರಿಯ ನ್ಯಾ. ಕೆಟಿಎಸ್​ ತುಳಸಿ, ಚುನಾವಣೆ ಹೊತ್ತಿನಲ್ಲಿ ಉದ್ದೇಶ ಪೂರ್ವಕವಾಗಿ ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ಇವತ್ತಿನವರೆಗೆ ಹಣ ವರ್ಗಾವಣೆ ಕುರಿತು ಯಾವುದೇ ಸಾಕ್ಷ್ಯವನ್ನು ಕಲೆಹಾಕಿಲ್ಲ. ಇದು ರಾಜಕೀಯ ಪ್ರೇರಿತ. ವಾದ್ರಾ ಕಾನೂನು ಪರಿಪಾಲಿಸುವ ನಾಗರೀಕ. ಜಾರಿ ನಿರ್ದೇಶನಲಯ ಈ ಕುರಿತು ಏನು ಬೇಕಾದರೂ ಕೇಳಬಹುದು. ಇದಕ್ಕೆ ಸಮರ್ಥ ಉತ್ತರ ನೀಡುತ್ತೇವೆ ಎಂದು ತಿಳಿಸಿದರು. ಅಲ್ಲದೇ ಫೆ. 6ರಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದರು.

Money Laundering Case; Robert Vadra Gets Anticipatory Bail

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ